alex Certify ಬಿಸಿ ಹಾಲಿಗೆ ಈ ಮೂರು ಡ್ರೈಫ್ರೂಟ್ಸ್‌ ಬೆರೆಸಿ ಕುಡಿಯಿರಿ; ಅದರಲ್ಲಿದೆ ಅದ್ಬುತ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಹಾಲಿಗೆ ಈ ಮೂರು ಡ್ರೈಫ್ರೂಟ್ಸ್‌ ಬೆರೆಸಿ ಕುಡಿಯಿರಿ; ಅದರಲ್ಲಿದೆ ಅದ್ಬುತ ಪ್ರಯೋಜನ

ಭಾರತದಲ್ಲಿ ಹಾಲಿನ ಸೇವನೆಯು ಅಧಿಕವಾಗಿದೆ. ಮಕ್ಕಳು, ವೃದ್ಧರು ಮತ್ತು ಯುವಜನರು ಹೀಗೆ ಎಲ್ಲಾ ವಯಸ್ಸಿನವರೂ ಈ ಸೂಪರ್ ಡ್ರಿಂಕ್ ಅನ್ನು ಕುಡಿಯಲು ಇಷ್ಟಪಡುತ್ತಾರೆ. ಹಾಲನ್ನು ಸ್ವತಃ ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಬಹುತೇಕ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಕನಿಷ್ಠ 2 ಲೋಟ ಹಾಲು ಕುಡಿಯಬೇಕು.

ನಾವು ಬಿಸಿ ಹಾಲಿನಲ್ಲಿ ಕೆಲವು ಡ್ರೈಫ್ರೂಟ್ಸ್‌ ಬೆರೆಸಿದರೆ, ಅದರ ಪೌಷ್ಟಿಕಾಂಶ  ಮತ್ತಷ್ಟು ಹೆಚ್ಚಾಗುತ್ತದೆ. ನಮ್ಮ ದೇಹಕ್ಕೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಡ್ರೈ ಫ್ರೂಟ್‌ಗಳನ್ನು ನಾವು ನೇರವಾಗಿ ಅಥವಾ ನೆನೆಸಿ ತಿನ್ನುತ್ತೇವೆ. ವೈದ್ಯರೇ ಹೇಳುವ ಪ್ರಕಾರ ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ಪುಡಿಮಾಡಿ ಹಾಲಿನಲ್ಲಿ ಬೆರೆಸಿ ಸೇವಿಸಬಹುದು. ಇದು ಹಾಲಿನ ರುಚಿಯನ್ನು ಸುಧಾರಿಸುವುದಲ್ಲದೆ, ಆರೋಗ್ಯಕರ ಆಯ್ಕೆಯೂ ಹೌದು.

ಈ ಮೂರು ಡ್ರೈ ಫ್ರೂಟ್‌ಗಳನ್ನು ಬಿಸಿ ಹಾಲಿಗೆ ಬೆರೆಸಿ ಕುಡಿದರೆ ನಿಮ್ಮ ತ್ವಚೆ ಆರೋಗ್ಯವಾಗಿರುವುದರ ಜೊತೆಗೆ ಕೂದಲು ಕೂಡ ಹೊಳಪು ಪಡೆದುಕೊಳ್ಳುತ್ತದೆ. ಮುಖ ಮತ್ತು ಕೂದಲಿನ ಸೌಂದರ್ಯ ದುಪ್ಪಟ್ಟಾಗುತ್ತದೆ.  ನೀವು ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ಪುಡಿ ಮಾಡಿ ಅದನ್ನು ಹಾಲಿನಲ್ಲಿ ಹಾಕಿ ಕುದಿಸಿಕೊಂಡು ಕುಡಿದರೆ ಮುಖ ಕಲೆರಹಿತವಾಗಿ ಹೊಳೆಯುತ್ತದೆ.

ಉಗುರಿನ ಗುರುತು, ಮೊಡವೆ ಮತ್ತು ಇತರ ಕಲೆಗಳನ್ನು ತೆಗೆದುಹಾಕುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಗೋಡಂಬಿ, ಒಣದ್ರಾಕ್ಷಿ ಮತ್ತು ಬಾದಾಮಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ನೀವು ಸೋಂಕು ಮತ್ತು ಅನೇಕ ರೋಗಗಳನ್ನು ತಪ್ಪಿಸಬಹುದು.

ಹಾಲಿನಲ್ಲಿರುವ ಕ್ಯಾಲ್ಸಿಯಂ ಸಹಾಯದಿಂದ ಮೂಳೆಗಳು ಬಲಗೊಳ್ಳುತ್ತವೆ. ಅವುಗಳಿಗೆ 3 ಬಗೆಯ ಡ್ರೈಫ್ರೂಟ್‌ ಸೇರಿಸಿದರೆ ನಮ್ಮ ಮೂಳೆಗಳು ಗಟ್ಟಿಯಾಗುತ್ತವೆ. ಅವುಗಳಲ್ಲಿ ಸಹ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಡಿ ಮತ್ತು ಮೆಗ್ನೀಸಿಯಮ್ ಇರುತ್ತದೆ. ಇದು ಕೀಲು ನೋವಿಗೂ ಪರಿಹಾರ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...