![](https://kannadadunia.com/wp-content/uploads/2022/02/FKW5UtFXEAE6nq_-scaled.jpg)
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ಮಥಿಯಾಸ್ ಮೌರೆರ್ ಅವರು ಸುಂದರವಾದ ವರ್ಣಚಿತ್ರಗಳಂತೆ ಕಾಣುವ ಭೂಮಿಯ ಅದ್ಭುತ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮರುಭೂಮಿಯಲ್ಲಿನ ಕೆಲವು ಆಕಾರಗಳು ಮತ್ತು ರೇಖೆಗಳು ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಜನವರಿ 30 ರಂದು ಟ್ವಿಟ್ಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ಬಳಕೆದಾರರು ಕೂಡ ಫೋಟೋಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಮ್ಯಾಥಿಯಾಸ್ ಐಬೇರಿಯನ್, ಪೆನಿನ್ಸುಲಾದ ರಾತ್ರಿಯ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬಹಾಮಾಸ್‌ನಲ್ಲಿನ ಹವಳದ ಬಂಡೆಗಳ ಅದ್ಭುತ ಚಿತ್ರಗಳು ನೆಟ್ಟಿಗರನ್ನು ಈಗಾಗಲೇ ಮಂತ್ರಮುಗ್ಧರನ್ನಾಗಿಸಿವೆ.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನಯಾತ್ರಿಯಾಗಿರುವ ಮಥಿಯಾಸ್ ಮೌರರ್, ಪ್ರಸ್ತುತ ಕಾಸ್ಮಿಕ್ ಕಿಸ್ ಮಿಷನ್‌ಗಾಗಿ ಬಾಹ್ಯಾಕಾಶದಲ್ಲಿದ್ದಾರೆ. ಮೌರರ್ ಆಗಾಗ್ಗೆ ಬಾಹ್ಯಾಕಾಶದಿಂದ ಅದ್ಭುತ ಕ್ಲಿಪ್‌ಗಳನ್ನು ಮತ್ತು ಭೂಮಿಯ ಛಾಯಾಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.