alex Certify ಬಾಳೆಕಾಯಿ – ಕಡಲೆಕಾಳಿನ ಕೂಟು ತಯಾರಿಸುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಕಾಯಿ – ಕಡಲೆಕಾಳಿನ ಕೂಟು ತಯಾರಿಸುವ ವಿಧಾನ

ಬಾಳೆಕಾಯಿ ಹಾಗೂ ಕಡಲೆಕಾಳಿನಿಂದ ರುಚಿಕರವಾದ ಕೂಟು ತಯಾರಿಸಬಹುದು. ಇದು ಚಪಾತಿ, ರೋಟಿ, ಹಾಗೂ ಬಿಸಿ ಅನ್ನದ ಜತೆ ತಿನ್ನಲು ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ.

½ ಕಪ್ ಕಡಲೆಕಾಳು, 1 ಬಾಳೆಕಾಯಿ, 1- ಈರುಳ್ಳಿ, 1- ಟೊಮೆಟೊ, ಬೆಳ್ಳುಳ್ಳಿ-6 ಎಸಳು, ಶುಂಠಿ-1 ಇಂಚು, ತೆಂಗಿನಕಾಯಿ-ಅರ್ಧ ಕಪ್, ಕೊತ್ತಂಬರಿ ಸೊಪ್ಪು-ಸ್ವಲ್ಪ, ಕಾಳುಮೆಣಸು-1/4 ಟೀ ಸ್ಪೂನ್ ಖಾರದ ಪುಡಿ-1.5 ಟೀ ಸ್ಪೂನ್, ಕೊತ್ತಂಬರಿ ಪುಡಿ-1.5 ಟೀ ಸ್ಪೂನ್, ಅರಿಶಿನ-1/4 ಟೀ ಸ್ಪೂನ್, ಸಣ್ಣ ಪೀಸ್ ಚಕ್ಕೆ, ಲವಂಗ-2, ಹಸಿಮೆಣಸು-2, ಉಪ್ಪು ರುಚಿಗೆ ತಕ್ಕಷ್ಟು.

ಅಗ್ಗದ ಬೆಲೆಗೆ ಬಿಎಸ್‌ಎನ್‌ಎಲ್ ನೀಡ್ತಿದೆ ಡೇಟಾ, ಉಚಿತ ಕರೆ

ಕಡಲೆಕಾಳನ್ನು ಚೆನ್ನಾಗಿ ತೊಳೆದು 5 ಗಂಟೆಗಳ ಕಾಲ ನೆನೆಸಿಟ್ಟು ಕುಕ್ಕರ್ ನಲ್ಲಿ 2 ವಿಷಲ್ ಕೂಗಿಸಿಕೊಳ್ಳಿ. ನಂತರ ಬಾಳೆಕಾಯಿಯ ಸಿಪ್ಪೆ ತೆಗೆದು ಹೋಳುಗಳನ್ನಾಗಿ ಮಾಡಿಕೊಂಡು ಕುದಿವ ನೀರಿಗೆ ಹಾಕಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಕುಕ್ಕರ್ ಗೆ 1 ಟೀ ಸ್ಪೂನ್ ಎಣ್ಣೆ ಹಾಕಿಕೊಂಡು ಅದಕ್ಕೆ ಕಾಳುಮೆಣಸು, ಲವಂಗ, ಚಕ್ಕೆ, ಬೆಳ್ಳುಳ್ಳಿ, ಶುಂಠಿ ಹಾಕಿ ಫ್ರೈ ಮಾಡಿ ನಂತರ ½ ಈರುಳ್ಳಿ ಕೊತ್ತಂಬರಿ ಸೊಪ್ಪು ತೆಂಗಿನಕಾಯಿ ತುರಿ ಹಾಕಿ ಹುರಿದುಕೊಂಡು ಒಂದು ಮಿಕ್ಸಿ ಜಾರಿಗೆ ಸೇರಿಸಿ ನಂತರ ಖಾರದಪುಡಿ, ಕೊತ್ತಂಬರಿಪುಡಿ ಹಾಕಿ ರುಬ್ಬಿಕೊಳ್ಳಿ.

ನಂತರ ಕುಕ್ಕರ್ ಗೆ 2 ಟೀ ಸ್ಪೂನ್ ಎಣ್ಣೆ ಹಾಕಿಕೊಂಡು ಉಳಿದ ಅರ್ಧ ಈರುಳ್ಳಿ ಕತ್ತರಿಸಿಕೊಂಡು ಹಾಕಿ ನಂತರ ಹಸಿಮೆಣಸು ಸೇರಿಸಿ ಆಮೇಲೆ ಅರಿಶಿನ , ಉಪ್ಪು ಹಾಕಿ ನಂತರ ಟೊಮೆಟೊ ಹಾಕಿ ಮೆತ್ತಗಾಗುವವರಗೆ ಬೇಯಿಸಿಕೊಂಡು ನಂತರ ರುಬ್ಬಿದ ಮಸಾಲೆ ಸೇರಿಸಿ ಮಿಕ್ಸ್ ಮಾಡಿಕೊಂಡು ನಂತರ ಬೇಯಿಸಿದ ಕಡಲೆಕಾಳು, ಬಾಳೆಕಾಯಿ ಹಾಕಿ ಕುಕ್ಕರ್ ಮುಚ್ಚಿ ಎರಡು ವಿಷಲ್ ಕೂಗಿಸಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...