alex Certify ಬಾಲ್ಯದಲ್ಲಿ ಎತ್ತಿ ಆಡಿಸಿದ ‘ಆಯಾ’ ಳನ್ನು 45 ವರ್ಷಗಳ ಬಳಿಕ ಹುಡುಕಿಕೊಂಡು ಹೋದ ವ್ಯಕ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲ್ಯದಲ್ಲಿ ಎತ್ತಿ ಆಡಿಸಿದ ‘ಆಯಾ’ ಳನ್ನು 45 ವರ್ಷಗಳ ಬಳಿಕ ಹುಡುಕಿಕೊಂಡು ಹೋದ ವ್ಯಕ್ತಿ…!

ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿರೋ ಕಾಲವಿದು. ಎಲ್ಲರೂ ತಾವಾಯಿತು ತಮ್ಮ ಕೆಲಸವಾಯಿತು ಅಂತ ಇದ್ದು ಬಿಡ್ತಾರೆ. ಚಿಕ್ಕವರಿದ್ದಾಗ ಆಡಿದ ಆಟ, ಆಗ ಹಿರಿಯರ ಜೊತೆಗೆ ಕಳೆದ ಸಮಯ, ಅವರು ನಮಗೆ ಹೇಳಿದ ನೀತಿ ಪಾಠಗಳು ಇದೆಲ್ಲದರ ಜೊತೆಗೆ ಅವರು ನಮಗೆ ಆರೈಕೆ ಮಾಡಿರೋ ರೀತಿ ಇವೆಲ್ಲ ಈಗ ನೆನಪು ಮಾತ್ರ. ಅದನ್ನ ನೆನಪು ಮಾಡಿಕೊಳ್ಳೊದಕ್ಕೂ ಈಗ ಯಾರ ಬಳಿ ಸಮಯವಿಲ್ಲ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಇದು. ಇಲ್ಲಿ ವ್ಯಕ್ತಿಯೊಬ್ಬ, ವಯಸ್ಸಾದ ಮಹಿಳೆಯನ್ನ ಭೇಟಿಯಾದ ಭಾವುಕ ಕ್ಷಣವಿದು. ಆಕೆ ಆ ವ್ಯಕ್ತಿಯನ್ನ ನೋಡಿ ಖುಷಿಯಿಂದ ಅಪ್ಪಿಕೊಂಡು ಕಣ್ಣೀರು ಹಾಕ್ತಿರುವ ದೃಶ್ಯ ಇದು. ಈ ವಿಡಿಯೋದಲ್ಲಿ ಅಂಥಹದ್ದೇನು ವಿಶೇಷ ಅಂತಿರಾ..?

ಅಸಲಿಗೆ ಈ ವ್ಯಕ್ತಿ 45 ವರ್ಷದ ನಂತರ ಈ ವೃದ್ಧೆಯನ್ನ ಭೇಟಿಯಾಗಿದ್ದ. ಈಕೆಯನ್ನ ನೋಡಲೆಂದೇ ಆತ ಸ್ಪೇನ್​​ನಿಂದ ಬೊಲೊವಿಯಾಗೆ ಹೋಗಿದ್ದ. ಅಂದರೆ ಸುಮಾರು 8 ಸಾವಿರ ಕಿಲೋಮೀಟರ್ಗೂ ಹೆಚ್ಚು ದೂರದ ಪ್ರಯಾಣ. ಕೊನೆಗೂ ಆತ ಆಕೆಯ ಮನೆ ಹುಡುಕಿದ್ದ.

ಮನೆಯ ಬಾಗಿಲ ಮುಂದೆ ನಿಂತಿದ್ದ ಆತನನ್ನ ಆಕೆಗೆ ಮಂಜಿನ ಕಣ್ಣಿನಿಂದ ಗುರುತಿಸೋದಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಆತ ತನ್ನ ಪರಿಚಯ ತಾನೇ ಮಾಡಿಕೊಂಡಾಗ ಆಕೆಯ ಖುಷಿಗೆ ಪಾರವೇ ಇರಲಿಲ್ಲ.

ಅಸಲಿಗೆ ಆತ ಪುಟ್ಟ ಮಗುವಾಗಿದ್ದಾಗ ಆತನ ಆರೈಕೆಗೆಂದೇ ಆತನ ತಂದೆ-ತಾಯಿ ಆಕೆಯನ್ನ ನೇಮಿಸಿದ್ದರು. ತಾನು ಎತ್ತಿ ಆಡಿಸಿದ ಮಗು, ಇಷ್ಟು ವರ್ಷವಾದರೂ ಮರೆಯದೇ ತನ್ನನ್ನ ಹುಡುಕಿಕೊಂಡು ಬಂದಿರೋದಕ್ಕೆ ಆಕೆ ಭಾವುಕಳಾಗಿದ್ದಳು. ಈ ಅಪರೂಪದ ಕ್ಷಣಗಳನ್ನ ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ.

ಗುಡ್​ನ್ಯೂಸ್​ ಕರೆಸ್ಪಾಂಡ್ ಅನ್ನೋ ಟ್ವಿಟ್ಟರ್ ಅಕೌಂಟ್​ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. 45 ವರ್ಷಗಳ ನಂತರ ತನ್ನ ನ್ಯಾನಿ(ಆಯಾ) ಯನ್ನ ಹುಡುಕಿ ತೆಗೆದ ವ್ಯಕ್ತಿ. ‘ಬಾಲ್ಯದಲ್ಲಿ ತನ್ನ ಮಗನಂತೆ ಕಾಳಜಿ ವಹಿಸಿದ ಆನಾ’ ಅಂತ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಈ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ. ಅವರು ಕೂಡಾ ತಮ್ಮ ಜೀವನದಲ್ಲಿ ಘಟಿಸಿರುವ ಈ ರೀತಿಯ ಅಪರೂಪದ ಕ್ಷಣಗಳನ್ನ ನೆನಸಿಕೊಂಡು ಕಾಮೆಂಟ್ ಹಾಕಿದ್ದಾರೆ.

— ☮️💙 Lena L Chen 💙☮️ (@LenaLChen) September 28, 2022

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...