alex Certify ಬಾಯಿಯ ಲಾಲಾರಸದಿಂದ ಆರೋಗ್ಯಕ್ಕೆ ಇದೆ ತುಂಬಾ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿಯ ಲಾಲಾರಸದಿಂದ ಆರೋಗ್ಯಕ್ಕೆ ಇದೆ ತುಂಬಾ ಪ್ರಯೋಜನ

ಮನುಷ್ಯರ ಬಾಯಿಯಲ್ಲಿ ಆಹಾರ ಜೀರ್ಣವಾಗಿಸಲು ಮತ್ತು ಬಾಯಿಯನ್ನು ತೇವದಿಂದ ಇಡಲು ಲಾಲಾರಸ ಉತ್ಪತ್ತಿಯಾಗುತ್ತದೆ. ಈ ಲಾಲಾರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಾಕಾರಿಯಾಗಿದೆ. ಅದು ಏನೆಂಬುದನ್ನು ತಿಳಿದುಕೊಳ್ಳಿ.

-ಈ ಲಾಲಾರಸದಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಶಕ್ತಿ ಇದೆ. ಹಾಗಾಗಿ ಗಾಯಗಳ ಮೇಲೆ ಹಚ್ಚುವುದರಿಂದ ಗಾಯಗಳು ಬೇಗ ವಾಸಿಯಾಗುತ್ತವೆ.

-ನಾವು ಆರೋಗ್ಯವಾಗಿರಲು ನಮ್ಮ ಬಾಯಿ ಸ್ವಚ್ಚವಾಗಿರಬೇಕು. ಇಲ್ಲವಾದರೆ ಬ್ಯಾಕ್ಟೀರಿಯಾ, ವೈರಸ್ ಗಳು ನಮ್ಮ ದೇಹವನ್ನು ಪ್ರವೆಶಿಸುತ್ತವೆ. ಲಾಲಾರಸದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ ನಮ್ಮ ಬಾಯಿಯನ್ನು ಸ್ವಚ್ಚಗೊಳಿಸುತ್ತದೆ.

-ಲಾಲಾರಸವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದು ಅನ್ನನಾಳ, ಹಲ್ಲು, ಒಸಡು, ಮೃದು ಅಂಗಾಂಶಗಳನ್ನು ರಕ್ಷಿಸುತ್ತದೆ. ಎದೆಯುರಿಯನ್ನು ತಡೆಯುತ್ತದೆ, ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ.

-ಲಾಲಾರಸವು ಹಲ್ಲುಗಳನ್ನು ರಕ್ಷಿಸುತ್ತದೆ. ಇದು ಹಲ್ಲುಗಳ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ. ಇದರಿಂದ ಹಲ್ಲುಗಳ ಮೇಲೆ ಯಾವುದೇ ಸಮಸ್ಯೆ ಉಂಟಾಗುವುದನ್ನು ತಡೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...