alex Certify ಬಾಯಲ್ಲಿ ನೀರೂರಿಸುವ ಕೋವಾ ಲಡ್ಡು ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುವ ಕೋವಾ ಲಡ್ಡು ಮಾಡುವ ವಿಧಾನ

ಮಕ್ಕಳಿಗೆ ಈಗ ರಜೆ. ಹೊರಗಡೆ ಹೋಗಿ ತಿನ್ನುವುದಕ್ಕೆ ಆಗುವುದಿಲ್ಲ. ಮನೆಯಲ್ಲಿ ಕೋವಾ ಮಾಡಿಟ್ಟುಕೊಂಡಿದ್ದರೆ ಅದರಿಂದ ರುಚಿಕರವಾದ ಲಡ್ಡು ಮಾಡಿಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು:

1 ಕಪ್ ಕೋವಾ, ಸಕ್ಕರೆ ಪುಡಿ – ½ ಕಪ್, ತೆಂಗಿನಕಾಯಿ ಪೌಡರ್ -ಅರ್ಧ ಕಪ್, 1 ಟೇಬಲ್ ಸ್ಪೂನ್ -ಬಾದಾಮಿ ಚಿಕ್ಕದ್ದಾಗಿ ಕತ್ತರಿಸಿದ್ದು, 1 ಟೇಬಲ್ ಸ್ಪೂನ್-ಗೋಡಂಬಿ -ಚಿಕ್ಕದ್ದಾಗಿ ಕತ್ತರಿಸಿದ್ದು, ಏಲಕ್ಕಿ ಪುಡಿ -1/4 ಟೀ ಸ್ಪೂನ್, ತುಪ್ಪ -1 ಟೇಬಲ್ ಸ್ಪೂನ್, 2 ಟೇಬಲ್ ಸ್ಪೂನ್ – ಹಾಲು.

ಮಾಡುವ ವಿಧಾನ:

ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ, ಹಾಲು ಹಾಕಿ ನಂತರ ಕೋವಾ ಅನ್ನು ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಅನ್ನು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ.

ನಂತರ ಅರ್ಧ ಕಪ್ ಸಕ್ಕರೆ ಪುಡಿ, ಕೊಬ್ಬರಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಗೋಡಂಬಿ, ಬಾದಾಮಿ, ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ. ನಂತರ ಗ್ಯಾಸ್ ಆಫ್ ಮಾಡಿ. ಇದು ಹದ ಬಿಸಿ ಇರುವಾಗ ಉಂಡೆ ಕಟ್ಟಿ. ತೆಂಗಿನಕಾಯಿ ತುರಿಯಲ್ಲಿ ಹೊರಳಾಡಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...