alex Certify ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್-2: ಹಿಂದಿಯಲ್ಲಿ ದಾಖಲೆ ಬರೆದ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಕ್ಸಾಫೀಸ್ ನಲ್ಲಿ ಚಿಂದಿ ಉಡಾಯಿಸಿದ ಕೆಜಿಎಫ್-2: ಹಿಂದಿಯಲ್ಲಿ ದಾಖಲೆ ಬರೆದ ಚಿತ್ರ

ಯಶ್ ಅಭಿನಯದ ಕೆಜಿಎಫ್- 2 ಚಿತ್ರ ಬಾಕ್ಸ್ ಆಫೀಸ್‌ ಉಡೀಸ್ ಮಾಡಿದ್ದು, ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರವು ವಿಶ್ವಾದ್ಯಂತ 1000 ಕೋಟಿ ರೂ. ಕ್ಲಬ್‌ ಸೇರಲು ಹತ್ತಿರವಾಗುತ್ತಿದೆ. ಅಷ್ಟೇ ಅಲ್ಲ, ಈ ಸಿನಿಮಾದ ಹಿಂದಿ ಡಬ್ ದಾಖಲೆಗಳನ್ನು ಸಹ ಮುರಿಯುತ್ತಿದೆ.

ಕೇವಲ 11 ದಿನಗಳಲ್ಲಿ ಈ ಚಿತ್ರ 300 ಕೋಟಿ ಕ್ಲಬ್‌ಗೆ ಪ್ರವೇಶಿಸಿತ್ತು. ಇದೀಗ, 14 ದಿನಗಳಲ್ಲಿ ಹಿಂದಿಯಲ್ಲಿ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಇದರರ್ಥ ಕೆಜಿಎಫ್ 2, ಪಿಕೆ, ಸಂಜು ಮತ್ತು ಟೈಗರ್ ಜಿಂದಾ ಹೈ ನಂತಹ ಕೆಲವು ದೊಡ್ಡ ಬಾಲಿವುಡ್ ಚಲನಚಿತ್ರಗಳನ್ನು ಹಿಂದಿಕ್ಕಿದೆ.

13 ನೇ ದಿನದಂದು, ಅಂದರೆ ಬುಧವಾರದಂದು ಚಿತ್ರವು ರೂ. 6.25 ಕೋಟಿಗಳಾಗಿದ್ದು, ಒಟ್ಟು 343.13 ಕೋಟಿ ರೂ. ಬಾಚಿದೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಇದು ಸಲ್ಮಾನ್ ಖಾನ್-ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ, ಅಮೀರ್ ಖಾನ್ ಅವರ ಪಿಕೆ ಗಿಂತ ಹೆಚ್ಚು ಗಳಿಕೆ ಮಾಡಿದೆ.

ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸಿನತ್ತ ಚಿತ್ರ ಸಾಗುತ್ತಿದ್ದು, 1000 ಕೋಟಿ ರೂ. ಕ್ಲಬ್ ಸೇರುವ ಸಮೀಪದಲ್ಲಿದೆ. ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ಚಿತ್ರವು  ಬುಧವಾರದಂದು 19.37 ಕೋಟಿ ರೂ. ಗಳಿಸಿದ್ದು, ವಿಶ್ವಾದ್ಯಂತ ಒಟ್ಟು 926.67 ಕೋಟಿ ರೂ. ಬಾಚಿದೆ.

ಕೆಜಿಎಫ್-2 ಹಿಂದಿ ಆವೃತ್ತಿ 250 ಕೋಟಿ ಮತ್ತು 300 ಕೋಟಿ ಕ್ಲಬ್‌ಗೆ ಪ್ರವೇಶಿಸುವ ಮೂಲಕ ಅತ್ಯಂತ ವೇಗವಾಗಿ ಇಷ್ಟೊಂದು ದೊಡ್ಡ ಮೊತ್ತ ಪಡೆದ ಚಿತ್ರವಾಗಿ ಹೊರಹೊಮ್ಮಿದೆ. ಇದು ಬಾಹುಬಲಿ: ದಿ ಕನ್‌ಕ್ಲೂಷನ್ ನಂತರ 300 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸುತ್ತಿರುವ ಎರಡನೇ ಡಬ್ಬಿಂಗ್ ಚಿತ್ರವಾಗಿದೆ.

— taran adarsh (@taran_adarsh) April 28, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...