alex Certify ಬಳೆ ಧರಿಸುವ ಮುನ್ನ ಶಾಸ್ತ್ರದ ಬಗ್ಗೆ ತಿಳಿದಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳೆ ಧರಿಸುವ ಮುನ್ನ ಶಾಸ್ತ್ರದ ಬಗ್ಗೆ ತಿಳಿದಿರಿ

ಪ್ರಾಚೀನ ಕಾಲದಿಂದಲೂ ಬಳೆ ಮಹಿಳೆಯರ ಸೌಂದರ್ಯ ಹಾಗೂ ಸೌಭಾಗ್ಯವಾಗಿದೆ. ಬಳೆಗಳು ಸೌಂದರ್ಯ ವೃದ್ಧಿಯ ಜೊತೆಗೆ ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಮಹಿಳೆಯರೊಂದೇ ಅಲ್ಲ ಪುರುಷರು ಕೂಡ ಕಡಗ ಅಥವಾ ಬ್ರೇಸ್ಲೈಟ್ ರೂಪದಲ್ಲಿ ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬಳೆಗೆ ಮಹತ್ವದ ಸ್ಥಾನ ನೀಡಲಾಗಿದೆ.

ಬಳೆಗಳು ಸಾಮಾನ್ಯವಾಗಿ ಗೋಲಾಕಾರದಲ್ಲಿರುತ್ತವೆ. ಇದು ಬುಧ ಹಾಗೂ ಚಂದ್ರನ ಪ್ರತೀಕ.

ವೈವಾಹಿಕ ಜೀವನ ಹಾಗೂ ಸೌಂದರ್ಯದ ನಂಟಿರುವ ಕಾರಣ ಬಳೆಯನ್ನು ಶುಕ್ರನ ಸಂಕೇತವೆಂದೂ ಹೇಳಲಾಗುತ್ತದೆ.

ನಿಯಮದಂತೆ ಸೂಕ್ತ ಬಣ್ಣದ ಬಳೆ ಧರಿಸುವುದ್ರಿಂದ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.

ಪ್ರೀತಿ ಹಾಗೂ ವೃತ್ತಿ ಜೀವನದಲ್ಲೂ ಸಫಲತೆ ಸಿಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಬಳೆಯನ್ನು ಶನಿವಾರ ಮತ್ತು ಮಂಗಳವಾರ ಖರೀದಿ ಮಾಡಬಾರದು.

ಬಳೆ ಧರಿಸುವ ಮುನ್ನ ತಾಯಿ ಗೌರಿಗೆ ಸಮರ್ಪಣೆ ಮಾಡಬೇಕು.

ಹೊಸ ಬಳೆಯನ್ನು ಪ್ರಾಂತಃ ಕಾಲ ಅಥವಾ ಸಂಧ್ಯಾ ಕಾಲದಲ್ಲಿ ಧರಿಸಿ.

ಅವಿವಾಹಿತರು ಯಾವುದೇ ಬಣ್ಣದ ಬಳೆ ಧರಿಸಬಹುದು.

ವಿವಾಹಿತ ಮಹಿಳೆಯರು ಕಪ್ಪು ಬಣ್ಣದ ಬಳೆಯನ್ನು ಧರಿಸಬಾರದು.

ಬಿಳಿ ಬಣ್ಣದ ಬಳೆ ಧರಿಸುವುದಾದ್ರೆ ಅದ್ರ ಜೊತೆ ಕೆಂಪು ಬಣ್ಣದ ಬಳೆ ಹಾಕಿ.

ಗಾಜು ಅಥವಾ ಬೆಳ್ಳಿ, ಬಂಗಾರದ ಬಳೆಯನ್ನು ಮಾತ್ರ ಮಹಿಳೆಯರು ಧರಿಸಬೇಕು.

ಪುರುಷರು ಕಬ್ಬಿಣ, ತಾಮ್ರ, ಚಿನ್ನ, ಬೆಳ್ಳಿ ಬಳೆ ಧರಿಸಬಹುದು.

ವೈವಾಹಿಕ ಜೀವನ ಸುಖಕರವಾಗಿರಬೇಕೆಂದ್ರೆ ಗುಲಾಬಿ ಬಣ್ಣದ ಬಳೆ ಧರಿಸಿ.

ಶೀಘ್ರ ಮದುವೆ ಬಯಸುವವರು ತಾಯಿ ದುರ್ಗೆಗೆ ಕೆಂಪು ಬಳೆ ಹಾಗೂ ಕೆಂಪು ದುಪಟ್ಟಾ ಅರ್ಪಣೆ ಮಾಡಿ.

ಸಂತಾನ ಪ್ರಾಪ್ತಿಗೆ ಹಳದಿ ಬಣ್ಣದ ಬಳೆ ಧರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...