alex Certify ಬಳಕೆದಾರರಿಗೆ ಗಂಟೆಗಳ ಕಾಲ ಕೈಕೊಟ್ಟ ಇನ್ಸ್ಟಾಗ್ರಾಮ್; ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರಿಗೆ ಗಂಟೆಗಳ ಕಾಲ ಕೈಕೊಟ್ಟ ಇನ್ಸ್ಟಾಗ್ರಾಮ್; ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಟ

ಜನಪ್ರಿಯ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ತಾಂತ್ರಿಕ ಕಾರಣಗಳಿಗಾಗಿ ವಿಶ್ವದ ಕೆಲವೆಡೆ ಗಂಟೆಗಳ ಕಾಲ ಸ್ಥಗಿತಗೊಂಡಿದ್ದು, ಇದರಿಂದಾಗಿ ಬಳಕೆದಾರರು ಫೋಟೋ, ವಿಡಿಯೋ ಅಪ್ಲೋಡ್ ಮಾಡಲಾಗದೆ ಪರದಾಡಿದ್ದಾರೆ.

ಈ ವಿಚಾರವನ್ನು ಮತ್ತೊಂದು ಸಾಮಾಜಿಕ ಜಾಲತಾಣ ಫ್ಲ್ಯಾಟ್ ಫಾರ್ಮ್ ಆದ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, instagram ಬಳಕೆ ವೇಳೆ ತಮಗಾದ ತೊಂದರೆಯನ್ನು ವಿವರಿಸಿದ್ದಾರೆ.

ಇನ್ಸ್ಟಾಗ್ರಾಮ್ ತಂಡವೂ ಕೂಡ ಈ ಕುರಿತಂತೆ ಟ್ವೀಟ್ ಮಾಡಿದ್ದು, ತಾಂತ್ರಿಕ ಕಾರಣಕ್ಕೆ ಈ ಸಮಸ್ಯೆ ಎದುರಾಗಿದೆ. ನಮ್ಮ ತಂಡ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರವೇ ಇದು ಸರಿ ಹೋಗಲಿದೆ ಎಂದು ತಿಳಿಸಿದೆ.

ಇದೀಗ ಇನ್ಸ್ಟಾಗ್ರಾಮ್ ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 2 ಗಂಟೆಗಳ ಕಾಲ ಕೆಲ ಬಳಕೆದಾರರಿಗೆ ಸಮಸ್ಯೆ ಎದುರಾಗಿತ್ತು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...