alex Certify ಬಡ ಜನತೆಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಪಡಿತರ ಸೌಲಭ್ಯ 6 ತಿಂಗಳು ವಿಸ್ತರಣೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ ಜನತೆಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಪಡಿತರ ಸೌಲಭ್ಯ 6 ತಿಂಗಳು ವಿಸ್ತರಣೆ ಸಾಧ್ಯತೆ

ಬಡ ಜನತೆಗೆ ನೆರವಾಗಲೆಂಬ ಕಾರಣಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು 2020ರ ಮಾರ್ಚ್ ನಲ್ಲಿ ಆರಂಭಿಸಲಾಗಿದ್ದು, ಈ ಯೋಜನೆ ಅಡಿ 5 ಕೆ.ಜಿ. ಉಚಿತ ಪಡಿತರ ವಿತರಿಸಲಾಗುತ್ತಿದೆ. ಇದೀಗ ಈ ಯೋಜನೆಯನ್ನು ಮತ್ತೆ ಮೂರು ಅಥವಾ ಆರು ತಿಂಗಳ ಕಾಲ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.

ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 30ರ ನಂತರ ಈ ಯೋಜನೆಯನ್ನು ಮುಂದಿನ ಮೂರು ಅಥವಾ ಆರು ತಿಂಗಳುಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಆದರೆ ಯಾವಾಗ ಈ ಕುರಿತಂತೆ ನಿರ್ಧಾರ ಹೊರಬೀಳಲಿದೆ ಎಂಬುದರ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ದೇಶದಾದ್ಯಂತ 80 ಕೋಟಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ಒದಗಿಸಲಾಗಿದೆ. ಈ ಯೋಜನೆ ಮತ್ತಷ್ಟು ಕಾಲ ಮುಂದುವರೆದರೆ ಬಡ ಜನತೆಗೆ ಅನುಕೂಲವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...