alex Certify ಬಟ್ಟೆ ಹೆಚ್ಚಾದರೆ ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ವೈರಲ್​ ಆಗಿರೋ ಈ ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಹೆಚ್ಚಾದರೆ ಹೇಗಪ್ಪಾ ಪ್ಯಾಕ್​ ಮಾಡೋದು ಎಂಬ ಚಿಂತೆಯೆ ? ವೈರಲ್​ ಆಗಿರೋ ಈ ವಿಡಿಯೋ ನೋಡಿ

ಪ್ರಪಂಚದಾದ್ಯಂತದ ವಿಮಾನಯಾನ ಸಂಸ್ಥೆಗಳು ಬ್ಯಾಗೇಜ್ ತೂಕದ ಮೇಲೆ ನಿರ್ಬಂಧಗಳನ್ನು ಹಾಕಿವೆ. ಆದ್ದರಿಂದ, ಈ ಸಂದರ್ಭದಲ್ಲಿ, ಜನರು ಪ್ರಯಾಣ ಮಾಡುವಾಗ ತಮ್ಮ ಅಗತ್ಯ ವಸ್ತುಗಳನ್ನು ಮಾತ್ರ ಕೊಂಡೊಯ್ಯುವುದು ಅತ್ಯಗತ್ಯ. ಇದು ಒಂದೆಡೆಯಾದರೆ, ಪ್ರವಾಸಗಳಿಗೆ ಹೋಗುವಾಗ ಲಗೇಜ್​ಗಳನ್ನು ಪ್ಯಾಕ್​ ಮಾಡಿಕೊಳ್ಳುವುದೇ ದೊಡ್ಡ ತಲೆನೋವು. ಅದರಲ್ಲಿಯೂ ಬಹಳ ದಿನಗಳ ಪ್ರವಾಸವಾಗಿದ್ದರೆ ಬ್ಯಾಗ್​ಗಳ ಸಂಖ್ಯೆ ಮಿತಿಮೀರುತ್ತವೆ.

ಆದರೆ ವೈರಲ್​ ಆಗಿರುವ ಈ ನೋಡಿದ ಮೇಲೆ ಲಗೇಜ್​ಗಳನ್ನು ಪ್ಯಾಕ್​ ಮಾಡುವುದು ಎಷ್ಟು ಸುಲಭ ಎಂದು ತಿಳಿದುಕೊಳ್ಳಬಹುದು. ಅಗತ್ಯ ಇರುವ ಎಲ್ಲಾ ಸಾಮಗ್ರಿಗಳು ಮತ್ತು ಕೆಲವು ಹೆಚ್ಚುವರಿ ಸಾಮಗ್ರಿಗಳನ್ನು ಹೊಂದಿಸುವುದು ಎಷ್ಟು ಸುಲಭ ಎಂದು ಈ ಮಹಿಳೆ ತೋರಿಸಿಕೊಟ್ಟಿದ್ದಾಳೆ.

ಈ 35-ಸೆಕೆಂಡ್‌ಗಳ ವೀಡಿಯೊ ಕಡಿಮೆ ಜಾಗದಲ್ಲಿ ಗರಿಷ್ಠ ಬಟ್ಟೆಗಳನ್ನು ಹೇಗೆ ಇಡುವುದು ಎಂಬುದನ್ನು ತೋರಿಸುತ್ತದೆ. ಮಹಿಳೆಯೊಬ್ಬರು ವಿಶಿಷ್ಟವಾಗಿ ಬಟ್ಟೆಗಳನ್ನು ಪ್ಯಾಕ್ ಮಾಡುವುದನ್ನು ವಿಡಿಯೋ ತೋರಿಸುತ್ತದೆ.

ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಲು ಬಯಸಿದರೆ, ಅದಕ್ಕಿಂತಲೂ ಮುಖ್ಯವಾಗಿ ವಿಮಾನಯಾನ ಸಂಸ್ಥೆಗಳು ಸೂಚಿಸಿದ ತೂಕದ ಮಿತಿಯಲ್ಲಿ ಸಂಪೂರ್ಣ ಲಗೇಜ್ ನಿರ್ವಹಿಸಲು ಬಯಸಿದರೆ ಅಂಥವರಿಗೆ ಈ ವಿಡಿಯೋ ಬಹಳ ಸಹಕಾರಿಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆ ವಿಶಿಷ್ಟವಾಗಿ ಬಟ್ಟೆಗಳನ್ನು ಪ್ಯಾಕ್ ಮಾಡುವುದನ್ನು ತೋರಿಸುತ್ತದೆ. ಅವಳು ಬಟ್ಟೆಗಳನ್ನು ಒಂದನ್ನು ಮುಂದಕ್ಕೆ ಮತ್ತು ಇನ್ನೊಂದನ್ನು ಹಿಂದಕ್ಕೆ ಮಡಿಸುತ್ತಾಳೆ. ಅವಳು ಒಂದು ಬಟ್ಟೆಯ ಕಾಲರ್ ಅನ್ನು ಇನ್ನೊಂದರ ಮೇಲೆ ಇರಿಸುತ್ತಾಳೆ. ಹೀಗೆ ಹೋಗುವಾಗ, ಮಹಿಳೆ ಒಮ್ಮೆಗೆ 10 ಬಟ್ಟೆಗಳಿಗೆ ಜಾಗವನ್ನು ಸೃಷ್ಟಿಸುತ್ತಾಳೆ ಮತ್ತು ನಂತರ ಅವುಗಳನ್ನು ಅನಾಯಾಸವಾಗಿ ಚೀಲದಲ್ಲಿ ಜೋಡಿಸುತ್ತಾಳೆ.

— Tansu YEĞEN (@TansuYegen) November 19, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...