alex Certify ಬಟ್ಟೆ ಮಾಸ್ಕ್ ಬಳಕೆ ಕುರಿತು ತಜ್ಞರಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಮಾಸ್ಕ್ ಬಳಕೆ ಕುರಿತು ತಜ್ಞರಿಂದ ಮಹತ್ವದ ಮಾಹಿತಿ

ವಿಶ್ವಾದ್ಯಂತ ದಿನದಿಂದ ದಿನಕ್ಕೆ ಓಮಿಕ್ರಾನ್​ ಪ್ರಕರಣಗಳು ಮಿತಿಮೀರುತ್ತಲೇ ಇದ್ದು ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಓಮಿಕ್ರಾನ್​ ವಿರುದ್ಧದ ರಕ್ಷಣೆಗೆ ಬಟ್ಟೆಯಿಂದ ತಯಾರಾದ ಮಾಸ್ಕ್​ಗಳನ್ನು ಧರಿಸಿದರೆ ಯಾವುದೇ ಪ್ರಯೋಜನ ಇಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಕೋವಿಡ್​ 19 ಮೊದಲ ಅಲೆಯ ಸಮಯದಲ್ಲಿ ವೈದ್ಯಕೀಯ ವಸ್ತುಗಳಿಗೆ ಅಭಾವ ಉಂಟಾದ ಹಿನ್ನೆಲೆಯಲ್ಲಿ ಎನ್​ 95 ಮಾಸ್ಕ್​ಗಳನ್ನು ಬಳಸಬೇಕೆಂದೇನಿಲ್ಲ ಎಂದು ಅನೇಕರು ಹೇಳಿದ್ದರು. ಇದಾದ ಬಳಿಕ ಜನರಿಗೆ ಬಟ್ಟೆಯಿಂದ ತಯಾರಾದ ಮಾಸ್ಕ್​​ಗಳನ್ನೇ ಬಳಸುವಂತೆ ಉತ್ತೇಜನ ನೀಡಲಾಗಿತ್ತು. ಪ್ರಧಾನಿ ಮೋದಿ ಕೂಡ ತಮ್ಮ ಭಾಷಣವೊಂದರಲ್ಲಿ ಬಟ್ಟೆಯ ಮಾಸ್ಕ್​ನ್ನೇ ಧರಿಸಿ ಎಂದು ಜನತೆಗೆ ಕರೆ ನೀಡಿದ್ದರು.

ಬಟ್ಟೆಯಿಂದ ತಯಾರಾದ ಮಾಸ್ಕ್​ಗಳು ಅತ್ಯಂತ ಕಡಿಮೆ ದರ ಹಾಗೂ ಮರು ಬಳಕೆ ಮಾಡಲೂಬಹುದಾದ ಕಾರಣ ಜನತೆ ಹೆಚ್ಚಾಗಿ ಬಟ್ಟೆಯ ಮಾಸ್ಕ್​ಗಳನ್ನೇ ಬಳಸುತ್ತಿದ್ದಾರೆ.

ಬಟ್ಟೆಯಿಂದ ತಯಾರಾದ ಮಾಸ್ಕ್​​ಗಳು ಕೇವಲ ಮುಖಕ್ಕೊಂದು ಅಲಂಕಾರದ ವಸ್ತುವಾಗಬಹುದೇ ವಿನಃ ಮತ್ಯಾವುದೇ ಪ್ರಯೋಜನಗಳು ಇರೋದಿಲ್ಲ. ಓಮಿಕ್ರಾನ್​​ ಸೋಂಕು ತಡೆಯದಂತೆ ರಕ್ಷಿಸಲು ಬಟ್ಟೆಯಿಂದ ತಯಾರಾದ ಮಾಸ್ಕ್​ಗಳಿಂದ ಸಾಧ್ಯವೇ ಇಲ್ಲ ಎಂದು ಜಾರ್ಜ್​ ವಾಷಿಂಗ್ಟನ್​ ಮೈಕನ್​ ಇನ್​ಸ್ಟಿಟ್ಯೂಟ್​ ಆಫ್​​ ಪಬ್ಲಿಕ್​ ಹೆಲ್ತ್​​ನ ಪ್ರಾಧ್ಯಾಪಕ ಡಾ. ಲೇನಾ ವೇನ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...