alex Certify ಬಜೆಟ್ ಹಣ ಹಂಚಿಕೆ: ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲೊಂದಾದ ಕರ್ನಾಟಕಕ್ಕೆ ಕೇವಲ ಶೇ.3 ಮೀಸಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಜೆಟ್ ಹಣ ಹಂಚಿಕೆ: ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲೊಂದಾದ ಕರ್ನಾಟಕಕ್ಕೆ ಕೇವಲ ಶೇ.3 ಮೀಸಲು

ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್ ನಲ್ಲಿ ರಾಜ್ಯವಾರು ಕೇಂದ್ರೀಯ ತೆರಿಗೆ/ಸುಂಕ ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಶೇಕಡಾ 3 ಅಂದರೆ ಕೇವಲ 37,252 ಕೋಟಿ ರೂಪಾಯಿ ನೀಡಲಾಗಿದೆ.

ಉತ್ತರ ಪ್ರದೇಶ ಸಿಂಹಪಾಲನ್ನು ಪಡೆದಿದ್ದು, ಆ ರಾಜ್ಯಕ್ಕೆ ಬರೋಬ್ಬರಿ 1.83 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದ್ದರೆ ಎರಡನೇ ಸ್ಥಾನದಲ್ಲಿರುವ ಬಿಹಾರಕ್ಕೆ 1.02 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದೆ.

ಇನ್ನುಳಿದಂತೆ ಮಧ್ಯಪ್ರದೇಶಕ್ಕೆ 80,000 ಕೋಟಿ ರೂಪಾಯಿ, ಪಶ್ಚಿಮ ಬಂಗಾಳಕ್ಕೆ 76,000 ಕೋಟಿ ರೂಪಾಯಿ, ಮಹಾರಾಷ್ಟ್ರಕ್ಕೆ 64,000 ಕೋಟಿ ರೂಪಾಯಿ, ತಮಿಳುನಾಡಿಗೆ 41.6 ಸಾವಿರ ಕೋಟಿ ರೂಪಾಯಿ, ಆಂಧ್ರಪ್ರದೇಶಕ್ಕೆ 41.3 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ.

ಹಾಗೆಯೇ ಛತ್ತೀಸ್ಗಡಕ್ಕೆ 34 ಸಾವಿರ ಕೋಟಿ ರೂಪಾಯಿ, ಅಸ್ಸಾಂಗೆ 31 ಸಾವಿರ ಕೋಟಿ ರೂಪಾಯಿ, ಗುಜರಾತಿಗೆ 35 ಸಾವಿರ ಕೋಟಿ ರೂಪಾಯಿ, ಜಾರ್ಖಂಡ್ ಗೆ 33 ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...