alex Certify ಬಂಟ್ವಾಳದಲ್ಲೊಂದು ಅಮಾನವೀಯ ಘಟನೆ; ಅಪಘಾತದಲ್ಲಿ ಮೃತಪಟ್ಟ ಬಾಲಕನ ಶವವನ್ನು ಜೆಸಿಬಿಯಿಂದ ತಳ್ಳಿದ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಟ್ವಾಳದಲ್ಲೊಂದು ಅಮಾನವೀಯ ಘಟನೆ; ಅಪಘಾತದಲ್ಲಿ ಮೃತಪಟ್ಟ ಬಾಲಕನ ಶವವನ್ನು ಜೆಸಿಬಿಯಿಂದ ತಳ್ಳಿದ ಚಾಲಕ

ಬಂಟ್ವಾಳದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟ ವೇಳೆ ಚಾಲಕ ಜೆಸಿಬಿ ಮೂಲಕ ಶವವನ್ನು ಪಕ್ಕಕ್ಕೆ ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಆತನನ್ನು ಹಿಡಿದ ಸ್ಥಳೀಯರು ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.

ಭಾನುವಾರದಂದು ಈ ಘಟನೆ ಬಂಟ್ವಾಳ ಸಮೀಪದ ಕಣಿಯೂರಿನಲ್ಲಿ ನಡೆದಿದ್ದು, 12 ವರ್ಷದ ಅಹಮದ್ ಅಖಿಲ್ ಎಂಬ ವಿದ್ಯಾರ್ಥಿ ಸೈಕಲ್ ಮೇಲೆ ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಜೆಸಿಬಿ ಆತನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಪಾನಮತ್ತನಾಗಿದ್ದ ಜೆಸಿಬಿ ಚಾಲಕ ಗದಗ ಮೂಲದ ಭಾಷಾ ಸಾಬ್ ಆ ನಂತರ ಬಾಲಕನ ಶವವನ್ನು ಜೆಸಿಬಿ ಮೂಲಕವೇ ಪಕ್ಕಕ್ಕೆ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಆಕ್ರೋಶಗೊಂಡಿದ್ದ ಸ್ಥಳೀಯರು ಚಾಲಕನನ್ನು ಬೆನ್ನಟ್ಟಿ ಹಿಡಿದು ಥಳಿಸಿದ ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...