alex Certify ಚಿನ್ನದ ಆಭರಣ ಸ್ವಚ್ಛ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನದ ಆಭರಣ ಸ್ವಚ್ಛ ಮಾಡಲು ಇಲ್ಲಿದೆ ಟಿಪ್ಸ್

ಬಂಗಾರದ ಆಭರಣಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜಾಸ್ತಿ ಅಲ್ಲದಿದ್ದರೂ ಅಲ್ಪಸ್ವಲ್ಪವಾದರೂ ಆಭರಣ ಮಾಡಿಸಿಟ್ಟುಕೊಂಡಿರುತ್ತೇವೆ.

ದಿನನಿತ್ಯದ ಬಳಕೆಗೆಂದೋ ಅಥವಾ ಫಂಕ್ಷನ್ ಗೆಂದು ಆಭರಣ ಧರಿಸುತ್ತೇವೆ. ಬೆವರು, ಮತ್ತಿತರ ಧೂಳುಗಳಿಂದ ಅದರ ಹೊಳಪು ಮಸುಕಾಗಿರುತ್ತದೆ. ಈ ಚಿನ್ನದ ಆಭರಣಗಳನ್ನು ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ ನೋಡಿ.

ಒಂದು ಅಗಲವಾದ ಬೌಲ್ ಗೆ 1 ಗ್ಲಾಸ್ ಉಗುರು ಬೆಚ್ಚಗಿನ ನೀರು ಹಾಕಿ 1 ಚಮಚದಷ್ಟು ಶಾಂಪೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ½ ಟೀ ಸ್ಪೂನ್ ಅರಿಶಿನದ ಪುಡಿ ಹಾಕಿ ಮಿಕ್ಸ್ ಮಾಡಿ ಚಿನ್ನದ ಆಭರಣಗಳನ್ನು ಹಾಕಿ ½ ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಒಂದು ಟೂಥ್ ಬ್ರೆಷ್ ನ ಸಹಾಯದಿಂದ ತಿಕ್ಕಿ. ಆಮೇಲೆ ಬೇರೆ ನೀರಿನಲ್ಲಿ ಮತ್ತೊಮ್ಮೆ ತೊಳೆದು ಒಂದು ಹತ್ತಿ ಬಟ್ಟೆಯ ಸಹಾಯದಿಂದ ಇದರ ನೀರಿನ ಪಸೆ ಒರೆಸಿದರೆ ಚಿನ್ನ ಹೊಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...