alex Certify ಫ್ರಿಡ್ಜ್ ನಲ್ಲಿಟ್ಟಿದ್ದ ಹಣ್ಣು ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ 10 ವರ್ಷದ ಬಾಲಕನ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಡ್ಜ್ ನಲ್ಲಿಟ್ಟಿದ್ದ ಹಣ್ಣು ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ 10 ವರ್ಷದ ಬಾಲಕನ ಬರ್ಬರ ಹತ್ಯೆ

ಫ್ರಿಡ್ಜ್ ನಲ್ಲಿಟ್ಟಿದ್ದ ಹಣ್ಣು ತಿಂದಿದ್ದಕ್ಕೆ ಮನೆ ಕೆಲಸ ಮಾಡುತ್ತಿದ್ದ ಹತ್ತು ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿ ಆತನ ಆರು ವರ್ಷದ ಸಹೋದರನನ್ನು ಮಾರಣಾಂತಿಕವಾಗಿ ಗಾಯಗೊಳಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ನಸ್ರುಲ್ಲಾ ಎಂಬಾತನ ಮನೆಯಲ್ಲಿ ಹತ್ತು ವರ್ಷದ ರಿಜ್ವಾನ್ ಹಾಗೂ ಆರು ವರ್ಷದ ಕಮ್ರನ್ ಕೆಲಸ ಮಾಡುತ್ತಿದ್ದು, ಹಸಿವಾದ ಕಾರಣಕ್ಕೆ ಫ್ರಿಡ್ಜ್ ನಲ್ಲಿದ್ದ ಹಣ್ಣನ್ನು ತಿಂದಿದ್ದಾರೆ. ಇದನ್ನು ಗಮನಿಸಿದ ನಸ್ರುಲ್ಲಾ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳು ಅಮಾನುಷವಾಗಿ ಥಳಿಸಿದ್ದು, ಇದರ ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದರಿಂದ ಭಯಭೀತಗೊಂಡ ಕುಟುಂಬಸ್ಥರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹತ್ತು ವರ್ಷದ ರಿಜ್ವಾನ್ ಸಾವನ್ನಪ್ಪಿದ್ದು, ಕಮ್ರಾನ್ ಸಾವು – ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಈ ಘಟನೆ ದೇಶದಾದ್ಯಂತ ತೀವ್ರ ಖಂಡನೆಗೆ ಗುರಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...