alex Certify ಫ್ರಿಜ್‌ನಲ್ಲಿರುವ ಐಸ್ ಟ್ರೇ ಸ್ವಚ್ಛಗೊಳಿಸಲು ಅನುಸರಿಸಿ ಈ ಸುಲಭ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಿಜ್‌ನಲ್ಲಿರುವ ಐಸ್ ಟ್ರೇ ಸ್ವಚ್ಛಗೊಳಿಸಲು ಅನುಸರಿಸಿ ಈ ಸುಲಭ ವಿಧಾನ

ಫ್ರಿಜ್‌ನಲ್ಲಿರುವ ಐಸ್‌ ಟ್ರೇಗಳನ್ನು ಆಗಾಗ ಸ್ವಚ್ಛಗೊಳಿಸದಿದ್ದರೆ ಅವುಗಳಲ್ಲಿ ಕೊಳೆ ತುಂಬಿಕೊಂಡು ದುರ್ಗಂಧ ಬೀರುತ್ತವೆ. ಕೊಳೆಯಾಗಿರುವ ಐಸ್‌ ಟ್ರೇಗಳು ವಿವಿಧ ರೋಗಗಳು ಬರಲು ಕಾರಣವಾಗುತ್ತವೆ. ಐಸ್‌ ಟ್ರೇ ತೊಳೆಯಲು ಕೆಲವು ಸುಲಭ ವಿಧಾನಗಳಿವೆ.

* ಕೊಳೆಯಾಗಿರುವ ಐಸ್‌ ಟ್ರೇಗಳನ್ನು ಹರಿಯುವ ನೀರಿನ ಕೆಳಗೆ ಹಿಡಿದು ಚೆನ್ನಾಗಿ ತೊಳೆಯಿರಿ. ಇದರಿಂದ ಅದರಲ್ಲಿ ಅಂಟಿಕೊಂಡಿರುವ ಐಸ್‌ನ ಕಣಗಳು ಹೋಗುತ್ತವೆ.

* ಅರ್ಧ ಕಪ್‌ ನೀರಿಗೆ ಎರಡು ಟೀ ಸ್ಪೂನ್‌ ಬೇಕಿಂಗ್‌ ಸೋಡ ಹಾಕಿ ಕಲಸಿ. ಈ ದ್ರಾವಣವನ್ನು ಐಸ್‌ ಟ್ರೇಯ ಪ್ರತಿ ಕ್ಯೂಬ್‌ಗಳಿಗೆ ತುಂಬಿಸಿ ಸ್ವಲ್ಪ ಹೊತ್ತು ಇಡಿ. ನಂತರ ಟೂತ್‌ ಬ್ರಷ್‌ನಿಂದ ತಿಕ್ಕಿ ಬಟ್ಟೆಯಿಂದ ಟ್ರೇ ಮತ್ತು ಪ್ರತಿ ಕ್ಯೂಬ್‌ಗಳನ್ನೂ ಉಜ್ಜಿ, ಒರೆಸಿ ಸ್ವಚ್ಛ ಮಾಡಿ.

* ಬಳಿಕ ಆ ಟ್ರೇಯನ್ನು ಮತ್ತೆ ಹರಿಯುವ ನಲ್ಲಿ ನೀರಿನ ಕೆಳಗೆ ಹಿಡಿದುಕೊಂಡು ಚೆನ್ನಾಗಿ ಸ್ವಚ್ಛ ಮಾಡಿ.

* ಈ ಟ್ರೇಯನ್ನು ಚೆನ್ನಾಗಿ ಒಣಗಿಸಿ ನೀರು ತುಂಬಿಸಿ ಫ್ರೀಜರ್‌ನಲ್ಲಿಡಿ. ಈ ಫ್ರೀಜರ್‌ನಲ್ಲಿ ಬೇಕಿಂಗ್‌ ಸೋಡಾದ ಬಾಕ್ಸ್‌ ಅನ್ನು ತೆರೆದಿಟ್ಟರೆ ಫ್ರೀಜರ್‌ನ ದುರ್ಗಂಧ ಹೋಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...