alex Certify ಫ್ಯಾಷನ್‌ ಗಾಗಿ ಗಡ್ಡ ಬಿಟ್ಟು ಪೇಚಾಡುತ್ತಿರುವವರು ಇದನ್ನೊಮ್ಮೆ ಓದಲೇಬೇಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಯಾಷನ್‌ ಗಾಗಿ ಗಡ್ಡ ಬಿಟ್ಟು ಪೇಚಾಡುತ್ತಿರುವವರು ಇದನ್ನೊಮ್ಮೆ ಓದಲೇಬೇಕು

ಇತ್ತೀಚಿನ ದಿನಗಳಲ್ಲಿ ಗಡ್ಡ ಬೆಳೆಸೋದು ಯುವಕರಲ್ಲಿ ಫ್ಯಾಷನ್‌ ಆಗಿಬಿಟ್ಟಿದೆ. ಕ್ರಿಕೆಟರ್ಸ್‌, ಸಿನೆಮಾ ನಟರಿಂದ ಹಿಡಿದು ಜನಸಾಮಾನ್ಯರು ಕೂಡ ಗಡ್ಡ ಬಿಡುತ್ತಿದ್ದಾರೆ. ಆದ್ರೆ ಕೆಲವೊಮ್ಮೆ ಸ್ಟೈಲ್‌ ಗಾಗಿ ಬಿಟ್ಟಿರೋ ಗಡ್ಡ ಕಿರಿಕಿರಿ ಮಾಡೋದುಂಟು.

ಕೆಲವರಿಗೆ ಗಡ್ಡದಲ್ಲಿ ತುರಿಕೆ ಶುರುವಾಗಬಹುದು. ಸ್ವಚ್ಛತೆಯ ಕೊರತೆ, ಒಣಚರ್ಮ, ಮೊಡವೆಗಳು ಇವೆಲ್ಲವೂ ಗಡ್ಡ ತುರಿಕೆಗೆ ಕಾರಣ. ಈ ರೀತಿ ಆಗದಂತೆ ತಡೆಯಲು ಸರಳವಾದ ಸೂತ್ರಗಳನ್ನು ಅನುಸರಿಸಿ.

ಮೊದಲನೆಯದಾಗಿ ಸ್ವಚ್ಛತೆಗೆ ಆದ್ಯತೆ ಕೊಡಿ. ಪ್ರತಿದಿನ ಸ್ನಾನ ಮಾಡಿ. ನಿಧಾನವಾಗಿ ಹೆಚ್ಚು ಉಜ್ಜದೇ ಮುಖವನ್ನು ತೊಳೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಕೇವಲ ಸ್ನಾನ ಮಾಡಿ, ಮುಖ ತೊಳೆದರೆ ಸಾಲದು.

ನಿಮ್ಮ ಗಡ್ಡಕ್ಕೂ ಆರೈಕೆಯ ಅಗತ್ಯವಿದೆ. ಒಳ್ಳೆಯ ತೈಲದಿಂದ ಆಗಾಗ ಗಡ್ಡಕ್ಕೆ ಮಸಾಜ್‌ ಮಾಡುತ್ತಿದ್ದರೆ, ಚೆನ್ನಾಗಿ ಬೆಳೆಯುತ್ತದೆ. ನಿಮಗೇನಾದ್ರೂ ಗಡ್ಡ ಬೆಳೆಸುವ ಇಚ್ಛೆಯಿದ್ದರೆ ಆಗಾಗ ಟ್ರಿಮ್‌ ಅಥವಾ ಶೇವ್‌ ಮಾಡಬೇಡಿ. ನಿರಾತಂಕವಾಗಿ ಅದನ್ನು ಬೆಳೆಯಲು ಬಿಡಿ.

ಹೀಗೆ ಮಾಡುವುದರಿಂದಲೂ ತುರಿಕೆಯಂತಹ ಸಮಸ್ಯೆ ಬರುವುದಿಲ್ಲ. ಬಹುಮುಖ್ಯವಾಗಿ ರಾಸಾಯನಿಕಗಳುಳ್ಳ ಫೇಸ್‌ ವಾಶ್‌, ಫೋಮ್‌, ಜೆಲ್‌ ಗಳಿಂದ ದೂರವಿರಿ. ಇವನ್ನು ಬಳಸಿದರೆ ತುರಿಕೆಯ ಸಮಸ್ಯೆ ಹೆಚ್ಚಾಗಬಹುದು. ಇಷ್ಟೆಲ್ಲಾ ಆರೈಕೆಯ ಬಳಿಕವೂ ತುರಿಕೆ ಕಡಿಮೆಯಾಗದೇ ಇದ್ದಲ್ಲಿ ತಜ್ಞರನ್ನು ಕಾಣುವುದು ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...