alex Certify ‘ಫೇಸ್ಬುಕ್’ ಬಳಕೆದಾರರ ಫಾಲೋವರ್ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆ; ಸಂಸ್ಥಾಪಕನಿಗೂ ಎದುರಾಯ್ತು ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಫೇಸ್ಬುಕ್’ ಬಳಕೆದಾರರ ಫಾಲೋವರ್ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆ; ಸಂಸ್ಥಾಪಕನಿಗೂ ಎದುರಾಯ್ತು ಈ ಸಮಸ್ಯೆ

ಫೇಸ್ಬುಕ್ ಬಳಕೆದಾರರ ಫಾಲೋವರ್ಸ್ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆಯಾಗಿದೆ. ಲಕ್ಷಾಂತರ, ಸಾವಿರಾರು ಫಾಲೋವರ್ಸ್ ಹೊಂದಿದ್ದವರಿಗೆ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.

ಕಳೆದ ರಾತ್ರಿಯಿಂದ ಈ ಸಮಸ್ಯೆ ಎದುರಾಗಿದೆ ಎನ್ನಲಾಗಿದ್ದು, ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಅವರ ಫಾಲೋವರ್ಸ್ ಗಳ ಸಂಖ್ಯೆಯಲ್ಲೂ ಕಡಿಮೆಯಾಗಿದೆ ಎಂದು ಹೇಳಲಾಗಿದೆ.

ಆದರೆ ತಾಂತ್ರಿಕ ಬಗ್ ಒಂದರ ಕಾರಣಕ್ಕಾಗಿ ಈ ರೀತಿ ಆಗಿದೆ ಎನ್ನಲಾಗಿದ್ದು, ವಾಸ್ತವವಾಗಿ ಬಳಕೆದಾರರಿಗೆ ಈ ಹಿಂದೆ ಹೊಂದಿದಷ್ಟೇ ಫಾಲೋವರ್ಸ್ಗಳು ಇದ್ದಾರೆ ಎಂದು ಹೇಳಲಾಗುತ್ತಿದೆ.

ಫೇಸ್ಬುಕ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಗಳು ಹೊಂದಿದ್ದವರು ತಮ್ಮ ಪೋಸ್ಟ್ ಗಳಲ್ಲಿ ಇದನ್ನೇ ಚರ್ಚೆ ವಿಷಯ ಮಾಡಿಕೊಂಡಿದ್ದು ವಿಶೇಷ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...