alex Certify ಫೇಶಿಯಲ್ ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೇಶಿಯಲ್ ಗೂ ಮುನ್ನ ಮತ್ತು ನಂತರ ಈ ತಪ್ಪುಗಳನ್ನು ಮಾಡಲೇಬೇಡಿ…!

ಫೇಶಿಯಲ್​ ಮಾಡುವ ಮುನ್ನ ಮತ್ತು ನಂತರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಮಾಡಿಸಿದ ಫೇಶಿಯಲ್​ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ವಿಷಯಗಳ ಕುರಿತು ಎಚ್ಚರಿಕೆಯಿಂದಿರಿ.

ನಿಮ್ಮ ತ್ವಚೆಗೆ ಒಪ್ಪುವ ಫೇಶಿಯಲ್​ ಆಯ್ದುಕೊಳ್ಳಿ. ಬೇರೆ ಬೇರೆ ತ್ವಚೆಗೆ ತಕ್ಕಂತ ವಿವಿಧ ರೀತಿಯ ಫೇಶಿಯಲ್ ​ಗಳಿವೆ. ಎಣ್ಣೆ ತ್ವಚೆಯವರಿಗೆ ಒಪ್ಪುವ ಫೇಶಿಯಲ್​ ಒಣ ತ್ವಚೆಯವರಿಗೆ ಒಪ್ಪುವುದಿಲ್ಲ.

ಹಾಗಾಗಿ ನಿಮ್ಮ ಬ್ಯೂಟಿಶಿಯನ್​ ಬಳಿ ಸಲಹೆ ಪಡೆದು ನಿಮ್ಮ ಫೇಶಿಯಲ್​ ಆಯ್ದುಕೊಳ್ಳಿ. ಜೊತೆಗೆ ನಿಮ್ಮ ತ್ವಚೆಗೆ ಪೋಷಣೆ ನೀಡುವ ಪದಾರ್ಥಗಳನ್ನು ಫೇಶಿಯಲ್​ ಗೆ ಸೇರಿಸಿಕೊಳ್ಳಿ.

ಫೇಶಿಯಲ್ ​ಗೂ ಮುನ್ನ ವ್ಯಾಕ್ಸ್​ ಅಥವಾ ಶೇವ್​ ಮಾಡುವುದರಿಂದ ತ್ವಚೆ ಸೆನ್ಸಿಟಿವ್​ ಆಗುತ್ತದೆ. ಫೇಶಿಯಲ್​ ಮಾಡುವಾಗ ಸ್ಕ್ರಬಿಂಗ್​ ಮತ್ತು ಮಸಾಜ್ ​ನ್ನು ಕೂಡ ಮಾಡಲಾಗುವುದರಿಂದ ತ್ವಚೆ ಸೆನ್ಸಿಟಿವ್​ ಆದ್ರೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಫೇಶಿಯಲ್ ​ಗೂ ಮುನ್ನ ವ್ಯಾಕ್ಸ್​ ಅಥವಾ ಶೇವ್​ ಬೇಡ.

ಫೇಶಿಯಲ್ ​ಗೂ ಮುನ್ನ ಮೇಕಪ್​ ಮಾಡುವುದನ್ನು ಅಥವಾ ಯಾವುದೇ ರೀತಿಯ ಕ್ರೀಮ್​ ಹಚ್ಚುವುದನ್ನು ಮಾಡಬೇಡಿ. ಸಾಧ್ಯವಾದರೇ, ಮೈಲ್ಡ್​ ಕ್ಲೆನ್ಸರ್ ​ನಿಂದ ಮುಖ ತೊಳೆಯಿರಿ.

ಫೇಶಿಯಲ್​ ಗೆ ಹೋಗುವ ಮುನ್ನ ಮತ್ತು ಫೇಶಿಯಲ್​ ನಂತರ ಸೂರ್ಯನ ಶಾಖವನ್ನು ತಾಗಿಸಬೇಡಿ. ಏಕೆಂದರೆ ಯುವಿ ರೇಡಿಯೇಶನ್​ನಿಂದ ತ್ವಚೆ ಸೆನ್ಸಿಟಿವ್​ ಆಗುತ್ತದೆ. ಫೇಶಿಯಲ್​​ ನಂತರ ಬಿಸಿಲಿಗೆ ಹೋದರೆ, ತ್ವಚೆ ಇನ್ನಷ್ಟು ಡ್ಯಾಮೇಜ್​ ಆಗುವ ಸಾಧ್ಯತೆ ಹೆಚ್ಚು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...