alex Certify ಫುಡ್‌ ಗಿಂತ ನನಗೆ ಸೆಕ್ಸ್‌ ಮುಖ್ಯ ಎಂದಿದ್ದ ಸಮಂತಾ ಹಳೆ ವಿಡಿಯೋ ಮತ್ತೆ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಡ್‌ ಗಿಂತ ನನಗೆ ಸೆಕ್ಸ್‌ ಮುಖ್ಯ ಎಂದಿದ್ದ ಸಮಂತಾ ಹಳೆ ವಿಡಿಯೋ ಮತ್ತೆ ವೈರಲ್…!

ಬಾಲಿವುಡ್ ಹಾಗೂ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ಸಮಂತಾ ರುತ್‌ ಪ್ರಭು, ಇತ್ತೀಚಿನ ದಿನಗಳಲ್ಲಿ ತಮ್ಮ ಮಾಜಿ ಪತಿ ನಾಗ ಚೈತನ್ಯರಿಂದ ಪ್ರತ್ಯೇಕಗೊಂಡು ಸುದ್ದಿ ಮಾಡಿದ್ದರು.

2017ರಲ್ಲಿ ಸಮಂತಾ ನೀಡಿದ್ದ ಸಂದರ್ಶನವೊಂದರಲ್ಲಿ, ಸೆಕ್ಸ್ ಹಾಗೂ ಆಹಾರಗಳ ನಡುವೆ ಒಂದನ್ನು ಆಯ್ಕೆ ಮಾಡಲು ಕೇಳಿದಾಗ ನಟಿ ಸೆಕ್ಸ್‌ ಅನ್ನು ಆರಿಸಿಕೊಂಡಿದ್ದರು.

’ಜಸ್ಟ್ ಫಾರ್‌ ವುಮೆನ್’ ಹೆಸರಿನ ನಿಯತಕಾಲಿಕೆಯೊಂದಕ್ಕೆ 2017ರಲ್ಲಿ ಸಂದರ್ಶನ ಕೊಟ್ಟಿದ್ದ ಸಮಂತಾ, ಆ ವೇಳೆ ನಡೆಸಲಾದ ರ‍್ಯಾಪಿಡ್ ಫೈರ್‌ ರೌಂಡ್‌ನಲ್ಲಿ ಸೆಕ್ಸ್ ಹಾಗೂ ಫುಡ್‌ ನಡುವೆ ಆಯ್ಕೆ ಮಾಡಲು ನಟಿಗೆ ತಿಳಿಸಲಾಗಿತ್ತು. ಆರಂಭದಲ್ಲಿ ಸ್ವಲ್ಪ ಮುಜುಗರಗೊಂಡ ಸಮಂತಾ, ಕೊನೆಯಲ್ಲಿ ಸೆಕ್ಸ್‌ ಅನ್ನು ಆಯ್ದುಕೊಂಡಿದ್ದರು. ಒಂದು ದಿನದ ಮಟ್ಟಿಗೆ ಆಹಾರವಿಲ್ಲದೇ ಇದ್ದರೂ ಸೆಕ್ಸ್‌ ಇಲ್ಲದೇ ಇರಲಾರೆ ಎಂದು ನಟಿ ಹೇಳಿಕೊಂಡಿದ್ದರು.

ಯೂಟ್ಯೂಬ್‌ನ ’ಆರ್‌ ಟ್ರೆಂಡಿಂಗ್ ರೀಲ್ಸ್‌’ ಚಾನೆಲ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಇದು ಈಗ ಮತ್ತೆ ವೈರಲ್‌ ಆಗಿದೆ

ಅಮೇಜ಼ಾನ್ ಪ್ರೈಂ ವೆಬ್‌ ಸರಣಿ ’ದಿ ಫ್ಯಾಮಿಲಿ ಮ್ಯಾನ್ 2’ನಲ್ಲಿ ’ರಾಜಿ’ ಪಾತ್ರ ನಿರ್ವಹಿಸುವ ಮೂಲಕ ಸಮಂತಾ ತಮ್ಮ ವೃತ್ತಿ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಏರಿದ್ದಾರೆ. ಈ ಪಾತ್ರದಲ್ಲಿ ಸಮಂತಾ ಅಭಿನಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ಆಕೆಗೆ ಬಾಲಿವುಡ್ ಹಾಗೂ ಹಾಲಿವುಡ್‌ಗಳಲ್ಲೂ ಅವಕಾಶಗಳ ಬಾಗಿಲು ತೆರೆಯುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...