alex Certify ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾದ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾದ ಯುವಕ….!

ಯುವಕನೊಬ್ಬ ತಾನು ಪ್ರೀತಿಸಿದ ಇಬ್ಬರು ಹುಡುಗಿಯರನ್ನು ಏಕಕಾಲದಲ್ಲಿ ವಿವಾಹವಾಗಿರುವ ಘಟನೆ ಜಾರ್ಖಂಡಿನ ಲೋಹರ್ದಾಗ ಗ್ರಾಮದಲ್ಲಿ ನಡೆದಿದೆ.

ಸಂದೀಪ್ ಒರಾನ್ ಎಂಬಾತ ಕುಸುಮ್ ಲಾಕ್ರ ಮತ್ತು ಸ್ವಾತಿ ಕುಮಾರಿಯನ್ನು ವಿವಾಹವಾಗಿದ್ದು ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಸಂದೀಪ್ ಈ ಮೊದಲೇ ಕುಸುಮ್ ಜೊತೆಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದು, ಅವರಿಗೆ ಒಂದು ಮಗು ಕೂಡ ಇದೆ. ಕಳೆದ ವರ್ಷ ಸಂದೀಪ್, ಪಶ್ಚಿಮ ಬಂಗಾಳದ ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಲು ತೆರಳಿದ್ದ ವೇಳೆ ಅವನಿಗೆ ಸ್ವಾತಿ ಕುಮಾರಿ ಪರಿಚಯವಾಗಿದೆ.

ಸ್ವಾತಿ ಕುಮಾರಿ ಜೊತೆಗೂ ಆತ ಲವ್ವಿಡವ್ವಿ ಆರಂಭಿಸಿದ್ದು, ಇದು ಗ್ರಾಮಸ್ಥರ ವಿರೋಧಕ್ಕೆ ಕಾರಣವಾಗಿದೆ. ಬಳಿಕ ಪಂಚಾಯಿತಿ ಸೇರಿ ಸಂದೀಪ್ ಇಬ್ಬರನ್ನೂ ಮದುವೆಯಾಗುವಂತೆ ಸೂಚಿಸಲಾಗಿದೆ. ಅದರಂತೆ ಸಂದೀಪ್ ಈಗ ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...