alex Certify ಪ್ರಾಣಕ್ಕೇ ಸಂಚಕಾರ ತರಬಹುದು ಮಾನಸಿಕ ಒತ್ತಡ, ಒತ್ತಡದ ಸಮಯದಲ್ಲಿ ಈ ಕೆಲಸಗಳನ್ನು ಮಾಡಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಕ್ಕೇ ಸಂಚಕಾರ ತರಬಹುದು ಮಾನಸಿಕ ಒತ್ತಡ, ಒತ್ತಡದ ಸಮಯದಲ್ಲಿ ಈ ಕೆಲಸಗಳನ್ನು ಮಾಡಿ…..!

ಪ್ರತಿಯೊಬ್ಬರಿಗೂ ಒತ್ತಡದ ಸಮಸ್ಯೆ ಇದ್ದೇ ಇರುತ್ತದೆ. ನಮ್ಮ ಬಿಡುವಿಲ್ಲದ ಜೀವನ ಶೈಲಿ ಕೂಡ ಇದಕ್ಕೆ ಕಾರಣ. ದೈನಂದಿನ ಒತ್ತಡವನ್ನು ಸಾವಧಾನತೆ ಮತ್ತು ಸಮಯ ನಿರ್ವಹಣೆಯ ಮೂಲಕ ನಿರ್ವಹಿಸುವುದು ಅವಶ್ಯಕ. ಆದರೆ ಜೀವನದಲ್ಲಿ ಸಂಭವಿಸುವ ಕೆಲವು ಅನಿರೀಕ್ಷಿತ ನಕಾರಾತ್ಮಕ ಘಟನೆಗಳು ನಮ್ಮನ್ನು ದುಃಖ, ಆಘಾತ ಹಾಗೂ ಅಸಾಧ್ಯವಾದ ಒತ್ತಡಕ್ಕೀಡು ಮಾಡುತ್ತವೆ.

ಅಂತಹ ಘಟನೆಗಳಾದಾಗ ಮನಸ್ಸನ್ನು ಆದಷ್ಟು ಶಾಂತವಾಗಿಡಲು ಪ್ರಯತ್ನಿಸಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಸ್ವಯಂ-ಆರೈಕೆ ಸಲಹೆಗಳನ್ನು ಅನುಸರಿಸಬೇಕು. ಒತ್ತಡದ ಸಮಯದಲ್ಲಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ನೋಡೋಣ.

ನಿಯಮಿತ ವ್ಯಾಯಾಮ: ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್ ಎಂಬ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ.

ಸಮತೋಲಿತ ಆಹಾರ: ಒತ್ತಡದ ಸಮಯದಲ್ಲಿ ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ. ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಸೊಪ್ಪು, ತರಕಾರಿಗಳು, ಹಣ್ಣುಗಳು, ಮೊಟ್ಟೆ ಮತ್ತು ಹಾಲು ಮುಂತಾದವುಗಳನ್ನು ಹೆಚ್ಚು ಹೆಚ್ಚು ಸೇವಿಸಿ.

ಸಮಯ ನಿರ್ವಹಣೆ: ಸಮಯದ ಬಗ್ಗೆ ಯೋಚಿಸಿ ಒತ್ತಡಕ್ಕೀಡಾಗಬೇಡಿ. ನಿಯಮಿತವಾಗಿ ಕೆಲಸ ಮಾಡಿ ಮತ್ತು ನಿಮ್ಮ ಗುರಿಗಳನ್ನು ಗಮನದಲ್ಲಿರಿಸಿಕೊಂಡು ಟೈಮ್‌ ಮ್ಯಾನೇಜ್‌ ಮಾಡಿಕೊಳ್ಳಿ.

ಸಾಕಷ್ಟು ನಿದ್ರೆ: ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನಿದ್ದೆ ಮುಖ್ಯ. ಒತ್ತಡದ ಸಮಯದಲ್ಲಿ ತಡವಾಗಿ ಅಥವಾ ಬೇಗನೆ ಎದ್ದೇಳಬೇಕು ಎಂದೆನಿಸಬಹುದು. ಆದರೆ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ದೇಹವನ್ನು ಆರೋಗ್ಯಕರವಾಗಿಡಲು ಸಾಕಷ್ಟು ನಿದ್ರೆ ಮಾಡುವುದು ಮುಖ್ಯವಾಗಿದೆ.

ಸಾಮಾಜಿಕ ಬೆಂಬಲ: ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮ ಮಾನಸಿಕ ದ್ವಂದ್ವ, ತುಮುಲಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ಒತ್ತಡವು ದೂರವಾಗುತ್ತದೆ. ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...