alex Certify ಪ್ರಯಾಣಿಕರೇ ಗಮನಿಸಿ: 3 ಹಾಗೂ 1 ದಿನದ ಪಾಸ್ ಪರಿಚಯಿಸಿದ ʼನಮ್ಮ ಮೆಟ್ರೋʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರೇ ಗಮನಿಸಿ: 3 ಹಾಗೂ 1 ದಿನದ ಪಾಸ್ ಪರಿಚಯಿಸಿದ ʼನಮ್ಮ ಮೆಟ್ರೋʼ

ಮಹತ್ವದ ಬದಲಾವಣೆಯೊಂದರಲ್ಲಿ ಬಿಎಂಆರ್​ಸಿಎಲ್​​ ಒಂದು ದಿನ ಹಾಗೂ ಮೂರು ದಿನಗಳು ಮಾನ್ಯವಿರುವ ಪಾಸ್​ಗಳನ್ನು ಪರಿಚಯಿಸಿದೆ. ಇದು ಏಪ್ರಿಲ್​​ 2 ರಿಂದ ಸ್ಮಾರ್ಟ್​ ಕಾರ್ಡ್​ ರೂಪದಲ್ಲಿ ಲಭ್ಯವಿರಲಿದೆ.

200 ರೂಪಾಯಿ ಮೌಲ್ಯದ ಒಂದು ದಿನದ ಪಾಸ್​​ 50 ರೂಪಾಯಿಗಳನ್ನು ಗ್ರಾಹಕರಿಗೆ ಮರಳಿ ನೀಡುವ ವ್ಯವಸ್ಥೆಯನ್ನು ಹೊಂದಿರುವ ಭದ್ರತಾ ಠೇವಣಿಗಳನ್ನು ಒಳಗೊಂಡಿದೆ. ಅಲ್ಲದೇ ಈ ಪಾಸ್​ನ ಮೂಲಕ ಅನಿಯಮಿತ ಪ್ರಯಾಣವನ್ನು ಮಾಡಬಹುದಾಗಿದೆ ಎಂದು ಬಿಎಂಆರ್​ಸಿಎಲ್​ ಹೇಳಿದೆ.

400 ರೂಪಾಯಿ ಮೌಲ್ಯದ ಮೂರು ದಿನಗಳ ಪಾಸ್​ 50 ರೂಪಾಯಿ ಮರುಪಾವತಿಯನ್ನು ಹೊಂದಿದೆ. ಪ್ರಯಾಣಿಕರು ನಿಲ್ದಾಣದ ಟಿಕೆಟ್ ಕೌಂಟರ್‌ಗಳಲ್ಲಿ ಪಾಸ್‌ಗಳನ್ನು ಖರೀದಿಸಬಹುದು. 50 ರೂಪಾಯಿ ಭದ್ರತಾ ಠೇವಣಿಯ ಮರುಪಾವತಿಗಾಗಿ ಕಾರ್ಡ್ ಹಿಂತಿರುಗಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...