alex Certify ಪ್ರಭಾಸ್ ಜೊತೆ ಡೇಟಿಂಗ್ ವದಂತಿ; ಸಾರಾಸಗಟಾಗಿ ತಳ್ಳಿ ಹಾಕಿದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಭಾಸ್ ಜೊತೆ ಡೇಟಿಂಗ್ ವದಂತಿ; ಸಾರಾಸಗಟಾಗಿ ತಳ್ಳಿ ಹಾಕಿದ ನಟಿ

‘ಬಾಹುಬಲಿ’ ಪ್ರಭಾಸ್ ವಿವಾಹದ ಕುರಿತ ವದಂತಿಗಳು ಸದಾ ಹರಿದಾಡುತ್ತಲೇ ಇರುತ್ತವೆ. ಹಲವು ನಟಿಯರೊಂದಿಗೆ ಪ್ರಭಾಸ್ ಹೆಸರು ಥಳಕು ಹಾಕಿಕೊಂಡಿತ್ತಾದರೂ ಬಳಿಕ ಅಷ್ಟೇ ಬೇಗ ಅದು ಸುಳ್ಳೆಂದು ಸಾಬೀತಾಗಿತ್ತು.

ಇದೀಗ ಪ್ರಭಾಸ್, ಬಾಲಿವುಡ್ ನಟಿ ಕೃತಿ ಸನಾನ್ ಜೊತೆ ಡೇಟಿಂಗ್ ನಲ್ಲಿದ್ದಾರೆ. ಶೀಘ್ರದಲ್ಲಿಯೇ ಇವರಿಬ್ಬರೂ ವಿವಾಹವಾಗಲಿದ್ದಾರೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು.

ಇದೀಗ ಈ ಕುರಿತಂತೆ ಸಾಮಾಜಿಕ ಜಾಲತಾಣ instagram ನಲ್ಲಿ ಕೃತಿ ಸನಾನ್ ಬರೆದುಕೊಂಡಿದ್ದು, ಪ್ರಭಾಸ್ ಜೊತೆಗಿನ ಡೇಟಿಂಗ್ ವದಂತಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಇದೊಂದು ಆಧಾರ ರಹಿತ ವದಂತಿ ಎಂದು ಸ್ಪಷ್ಟಪಡಿಸಿರುವ ಅವರು, ರಿಯಾಲಿಟಿ ಶೋ ಒಂದರ ವೇಳೆ ಸಹನಟ ಮಾಡಿದ ಜೋಕ್ ನಿಂದ ಇದು ಹಬ್ಬಿದೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...