alex Certify ಪ್ರಧಾನಿ ಮೋದಿ ವಿರುದ್ಧದ ಟೀಕೆಗೆ ಬಿಜೆಪಿ ತಿರುಗೇಟು; ಅನಿಮೇಟೆಡ್‌ ವಿಡಿಯೋ ಮೂಲಕ ವಿಪಕ್ಷಗಳಿಗೆ ಉತ್ತರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ವಿರುದ್ಧದ ಟೀಕೆಗೆ ಬಿಜೆಪಿ ತಿರುಗೇಟು; ಅನಿಮೇಟೆಡ್‌ ವಿಡಿಯೋ ಮೂಲಕ ವಿಪಕ್ಷಗಳಿಗೆ ಉತ್ತರ….!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಕ್ಕಾಗಿ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಅಷ್ಟೇ ಅಲ್ಲ 2007 ರಿಂದ ಇದುವರೆಗಿನ  ಪ್ರಧಾನಿ ಮೋದಿಯವರ ಪ್ರಯಾಣವನ್ನು ಚಿತ್ರಿಸುವ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡಿದೆ. ನಾಲ್ಕು ನಿಮಿಷಗಳ ವಿಡಿಯೋದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಬಿಂಬಿಸಲಾಗಿದೆ. ಪ್ರಧಾನಿ ಮೋದಿ ಅವರನ್ನು “ಮೌತ್ ಕಾ ಸೌದಾಗರ್”, “ಗೌತಮ್ ದಾಸ್”, “ಚಾಯ್‌ವಾಲಾʼʼ ಎಂದೆಲ್ಲಾ ಕರೆದಿರುವ ಪ್ರತಿಪಕ್ಷಗಳಿಗೆ ಈ ಮೂಲಕ ತಿರುಗೇಟು ನೀಡಿದೆ.

ಗುಜರಾತ್‌ ಸಿಎಂ ಆಗಿದ್ದ ನರೇಂದ್ರ ಮೋದಿ 2014ರ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಪ್ರಧಾನಿ ಹುದ್ದೇಗಿರಿದ ಸಂದರ್ಭದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮೋದಿ ಅವರು ಪ್ರಧಾನಿ ಕುರ್ಚಿಯತ್ತ ನಡೆಯಲು ಪ್ರಾರಂಭಿಸುತ್ತಿದ್ದಂತೆ ಅವರನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದರು, “ಮೌತ್ ಕಾ ಸೌದಾಗರ್” ಎಂದು ಕರೆದಿದ್ದರು.  ಮೋದಿ ಈ ಎಲ್ಲಾ ಟೀಕೆ ಟಿಪ್ಪಣಿಗಳನ್ನು ನಿರ್ಲಕ್ಷಿಸಿ ಪ್ರಧಾನಿ ಗದ್ದುಗೆಯತ್ತ ಸಾಗುವುದನ್ನು ವಿಡಿಯೋದಲ್ಲಿ ಚಿತ್ರಿಸಲಾಗಿದೆ.

ಪ್ರತಿಪಕ್ಷಗಳು ಮೋದಿ ಅವರನ್ನು “ಚಾಯ್‌ವಾಲಾ” ಎಂದು ಕರೆದಿದ್ದರು, ಅಮೆರಿಕ ವೀಸಾ ನಿಷೇಧಕ್ಕಾಗಿ ಅಪಹಾಸ್ಯ ಮಾಡಿದ್ದರು. ಆದರೆ ಮೋದಿ ಪ್ರಧಾನಿ ಹುದ್ದೆಗೇರಿದ ಬಳಿಕ ಆಗಿನ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ, ನಮೋ ಅವರನ್ನು ಆಹ್ವಾನಿಸಿದ್ದರು. ಇದನ್ನು ಕೂಡ ಅನಿಮೇಟೆಡ್‌ ವಿಡಿಯೋದಲ್ಲಿ ಚಿತ್ರಿಸಲಾಗಿದೆ.  ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ‘ಸ್ವಚ್ಛ ಭಾರತ್ ಮಿಷನ್’, ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’, ‘ಉಜ್ವಲ ಯೋಜನೆ’, ‘ಜನ್ ಧನ್ ಯೋಜನೆ’, ‘ಜೀವನ ಜ್ಯೋತಿ ಬಿಮಾ ಯೋಜನೆ’, ‘ಪಿಎಂ ಆವಾಸ್ ಯೋಜನೆ’, ‘ಫಸಲ್ ಬಿಮಾ ಯೋಜನೆ’ಯಂತಹ ಹಲವಾರು ಕಾಮಗಾರಿಗಳ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ.

2019 ರಲ್ಲಿ ಪ್ರಧಾನಿಯಾಗಿ ಪುನರಾಯ್ಕೆಯಾದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೋದಿ ಅವರ ವಿರುದ್ಧ ರಫೇಲ್ ಹಗರಣದ ಆರೋಪ ಮಾಡಿದ್ದರು. ಇದು ಕೂಡ ವಿಡಿಯೋದಲ್ಲಿದೆ.  ವೀಡಿಯೊ ಕ್ಲಿಪ್‌ನ ಕೊನೆಯ ಭಾಗದಲ್ಲಿ ‘ಗೌತಮ್ ದಾಸ್’,  ‘ನೀಚ್’, ‘ಜಿರಳೆ’, ‘ರಾವಣ’ ಮುಂತಾದ ಟೀಕೆಗಳಿಂದ ಪ್ರಧಾನಿ ಮೋದಿ ಪ್ರಭಾವಿತರಾಗಿಲ್ಲ ಮತ್ತು ಭಾರತವನ್ನು ಮುನ್ನಡೆಸುವತ್ತ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ವಿಡಿಯೋದನ್ನು ವಿವರಿಸಲಾಗಿದೆ.

ವಿರೋಧ ಪಕ್ಷಗಳ ನಾಯಕರು ಸಂಸತ್ತಿನ ಸಂಕೀರ್ಣದಲ್ಲಿ ಸಭೆ ನಡೆಸಿ,  ಅದಾನಿ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಅಥವಾ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗಾಗಿ ತಮ್ಮ ಬೇಡಿಕೆಯನ್ನು ಹೆಚ್ಚಿಸಲು ನಿರ್ಧರಿಸಿದ್ದರು. ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ವೇಳೆ ಲಂಡನ್‌ನಲ್ಲಿ ರಾಹುಲ್ ಗಾಂಧಿ ಅವರ ಪ್ರಜಾಪ್ರಭುತ್ವದ ಹೇಳಿಕೆಗಳ ಬಗ್ಗೆ ಕೂಡ ಚರ್ಚೆಯಾಗಿದೆ.

ಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ಸಿಪಿಐ-ಎಂ, ಜೆಡಿಯು, ಆರ್‌ಜೆಡಿ, ಎನ್‌ಸಿಪಿ, ಎಸ್‌ಪಿ, ಎಸ್‌ಎಸ್ (ಉದ್ಧವ್), ಎಎಪಿ, ಸಿಪಿಐ, ಜೆಎಂಎಂ, ಐಯುಎಂಎಲ್, ಎಂಡಿಎಂಕೆ, ಎನ್‌ಸಿ, ವಿಸಿಕೆ ಮತ್ತು ಕೇರಳ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಅದಾನಿ ವಿಚಾರದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೆಸ್‌ ಹಾಗೂ ವಿಪಕ್ಷಗಳು ನಿರ್ಧರಿಸಿವೆ. ವಿಪಕ್ಷಗಳ ಸಭೆಯ ಬೆನ್ನಲ್ಲೇ ಬಿಜೆಪಿ ಅನಿಮೇಟೆಡ್‌ ವಿಡಿಯೋವನ್ನು ಬಿಡುಗಡೆ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...