alex Certify ಪ್ರತಿ ಲೀಟರ್​ ಪೆಟ್ರೋಲ್​ – ಡೀಸೆಲ್​​ ದರದಲ್ಲಿ 80 ಪೈಸೆ ಎರಿಕೆ : LPG ಬೆಲೆಯಲ್ಲೂ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ಲೀಟರ್​ ಪೆಟ್ರೋಲ್​ – ಡೀಸೆಲ್​​ ದರದಲ್ಲಿ 80 ಪೈಸೆ ಎರಿಕೆ : LPG ಬೆಲೆಯಲ್ಲೂ ಹೆಚ್ಚಳ

ಪಂಚರಾಜ್ಯ ಚುನಾವಣೆಯ ಫಲಿತಾಂಶ ಹೊರಬಂದು 12 ದಿನಗಳ ಬಳಿಕ ಪ್ರತಿ ಲೀಟರ್​ ಪೆಟ್ರೋಲ್​ ಹಾಗೂ ಡೀಸೆಲ್​ ದರವು ಇಂದು 80 ಪೈಸೆ ಏರಿಕೆ ಕಂಡಿದೆ. ಇತ್ತ ಎಲ್​ಪಿಜಿ ಸಿಲಿಂಡರ್​ ಬೆಲೆ ಕೂಡ 50 ರೂ. ಏರಿಕೆ ಕಂಡಿದೆ.

ದೆಹಲಿಯಲ್ಲಿ ಈ ಹಿಂದೆ 95.41 ರೂಪಾಯಿ ಇದ್ದ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆಯು ಇದೀಗ ಲೀಟರ್​ಗೆ 96.21 ರೂಪಾಯಿ ಆಗಿದೆ. ಇತ್ತ ಡೀಸೆಲ್​ ದರವು ಪ್ರತಿ ಲೀಟರ್​​ಗೆ 86.67 ರೂಪಾಯಿಗಳಿಂದ 87.47 ರೂಪಾಯಿಗಳಿಗೆ ಏರಿಕೆ ಕಂಡಿದೆ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು 105.51 ರೂ., ಡೀಸೆಲ್ ದರಗಳು ಲೀಟರ್‌ಗೆ 90.62 ರೂ. ಆಗಿದೆ.

ತಮಿಳುನಾಡಿನ ಚೆನ್ನೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ಗೆ 102.16 ಮತ್ತು 92.19 ರೂ.ಗೆ ಏರಿಕೆಯಾಗಿದೆ.

ಜಾಗತಿಕ ಕಚ್ಛಾ ತೈಲಗಳು ಮೂರಂಕಿ ದಾಟಿ ಬಹಳ ದಿನ ಕಳೆದಿದ್ದರೂ ಸಹ ನವೆಂಬರ್​ ಬಳಿಕ ಇಂಧನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಆದರೆ ರಷ್ಯಾ ಹಾಗೂ ಉಕ್ರೇನ್​ನ ನಡುವಿನ ಯುದ್ಧದಿಂದಾಗಿ ಇಂಧನದ ಬೆಲೆ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...