ಹಾಲು ಹಾಗೂ ಅರಿಶಿನ ಆರೋಗ್ಯಕ್ಕೆ ಒಳ್ಳೆಯದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಹಾಲಿಗೆ ಅರಿಶಿನ ಬೆರೆತರೆ ಪ್ರಯೋಜನ ದುಪ್ಪಟ್ಟಾಗುತ್ತೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಜಾಸ್ತಿ ಇರುತ್ತದೆ. ಅರಿಶಿನದಲ್ಲಿ ಪ್ರತಿರೋಧನ ಶಕ್ತಿ ಇರುತ್ತದೆ. ಇವೆರಡೂ ಆರೋಗ್ಯಕ್ಕೆ ಒಳ್ಳೆಯದು. ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
ಬಿಸಿ ಹಾಲಿಗೆ ಅರಿಶಿನ ಬೆರೆಸಿ ಕುಡಿಯಬೇಕು. ಅಸ್ತಮಾ, ಗಂಟಲೂತ, ಕೆಮ್ಮು ಮತ್ತು ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿಯುವುದರಿಂದ ಪರಿಣಾಮ ಕಾಣಬಹುದಾಗಿದೆ. ಅರಿಶಿನ ದೇಹದ ಉಷ್ಣತೆಯನ್ನು ಜಾಸ್ತಿ ಮಾಡಿ ಸೈನಸ್ ಸಮಸ್ಯೆಯನ್ನು ಗುಣಪಡಿಸುತ್ತದೆ. ಬ್ಯಾಕ್ಟೀರಿಯಾ ಹಾಗೂ ವೈರಸ್ ಸೋಂಕುಗಳನ್ನು ಹೊಡೆದೋಡಿಸಲು ಇದು ಸಹಕಾರಿ.
ಗಾಂಧಿ ಜಯಂತಿ ಪ್ರಯುಕ್ತ ʼಮೆಟ್ರೋʼ ಪ್ರಯಾಣಿಕರಿಗೆ ಬಂಪರ್ ಆಫರ್
ಬೊಜ್ಜು ಕರಗಿಸಲು ಅರಿಶಿನದ ಹಾಲು ಬಹಳ ಒಳ್ಳೆಯದು. ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ಪೋಷಕಾಂಶಗಳು ತೂಕ ಕಡಿಮೆ ಮಾಡಲು ನೆರವಾಗುತ್ತವೆ.
ಅರಿಶಿನದ ಹಾಲು ಮೂಳೆಗಳನ್ನು ಬಲಪಡಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಶಿನದ ಹಾಲು ಸೇವನೆಯಿಂದ ಮೂಳೆಯಲ್ಲಿ ಕಾಣುವ ಸಮಸ್ಯೆಗಳು ಕಡಿಮೆಯಾಗುತ್ತವೆ.
ಆಯುರ್ವೇದದ ಪ್ರಕಾರ ಅರಿಶಿನದ ಹಾಲು ರಕ್ತ ಶುದ್ಧೀಕರಣ ಮಾಡುತ್ತದೆ. ರಕ್ತನಾಳಗಳನ್ನು ಇದು ಸ್ವಚ್ಛಗೊಳಿಸುತ್ತದೆ. ದೇಹದಲ್ಲಿ ರಕ್ತ ಪರಿಚಲನೆಯನ್ನು ಪ್ರಬಲಗೊಳಿಸುತ್ತದೆ.
ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಉಳಿದ ದುಡ್ಡಲ್ಲಿ ಮಾಡಿದ್ದೇನು ಗೊತ್ತಾ….?
ಜೀರ್ಣಕ್ರಿಯೆಗೆ ಅರಿಶಿನದ ಹಾಲು ಪ್ರಯೋಜನಕಾರಿ. ಹೊಟ್ಟೆಯ ಹುಣ್ಣನ್ನು ಇದು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ಉತ್ತಮ ಜೀರ್ಣಕ್ರಿಯೆಯಾಗುತ್ತದೆ. ಅತಿಸಾರ ಮತ್ತು ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ.
ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಹಾಲಿಗೆ ಅರಿಶಿನ ಬೆರೆಸಿ ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.