alex Certify ಪ್ರಕೃತಿಯ ರೋಮಾಂಚನಾಕಾರಿ ಚಿತ್ರವನ್ನು ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಕೃತಿಯ ರೋಮಾಂಚನಾಕಾರಿ ಚಿತ್ರವನ್ನು ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರ ಟ್ವಿಟ್ಟರ್ ಪ್ರೊಫೈಲ್ ಸ್ಪೂರ್ತಿದಾಯಕ ಪೋಸ್ಟ್‌ಗಳ ನಿಧಿಯಾಗಿದೆ. ಇದೀಗ ಅವರು, ಭೂಮಿಯ ದಿನದ ಸಂದರ್ಭದಲ್ಲಿ, ತಮ್ಮ ಟ್ವಿಟ್ಟರ್ ನಲ್ಲಿ ಪ್ರಕೃತಿಯ ಅದ್ಭುತ, ರೋಮಾಂಚನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಭೂಮಿದಿನವಾದ ಇಂದು ತಾನು ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಸಂಭ್ರಮದ ಫೋಟೋಗಳನ್ನು ಕೂಡ ಹಂಚಿಕೊಳ್ಳಿ ಎಂದು ಫೋಟೋ ಪೋಸ್ಟ್ ಮಾಡುತ್ತಾ ಮಹೀಂದ್ರಾ ಗ್ರೂಪ್ ನ ಮುಖ್ಯಸ್ಥರು ಶೀರ್ಷಿಕೆ ಬರೆದಿದ್ದಾರೆ.

ಉದ್ಯಮಿ ಮಹೀಂದ್ರಾ ಅವರು ತಮ್ಮ ವೈಯಕ್ತಿಕ ಗ್ಯಾಲರಿಯಿಂದ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದು ಕಡಲತೀರ, ಪರ್ವತ ಮತ್ತು ಸುಂದರವಾದ ಭೂದೃಶ್ಯಗಳನ್ನು ಒಳಗೊಂಡಿದೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ವೈಯಕ್ತಿಕ ಸಂಗ್ರಹಗಳಿಂದ ಪ್ರಕೃತಿಯ ಸೊಗಸಾದ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಹಲವಾರು ಮಂದಿ ಟ್ವೀಟಿಗರು ತಾವು ತೆಗೆದಿರುವ ಪ್ರಕೃತಿಯ ಅದ್ಭುತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ 22 ರಂದು ಭೂ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ಗೂಗಲ್ ಡೂಡಲ್ ಜಾಗೃತಿ ಮೂಡಿಸಲು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಲಾಕೃತಿಯನ್ನು ಹಂಚಿಕೊಂಡಿದೆ.

— anand mahindra (@anandmahindra) April 22, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...