alex Certify ಪೌಷ್ಟಿಕಾಂಶಗಳ ಆಗರ ದಾಳಿಂಬೆ ಸೇವಿಸಿ ಈ ಲಾಭ ಪಡೆಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೌಷ್ಟಿಕಾಂಶಗಳ ಆಗರ ದಾಳಿಂಬೆ ಸೇವಿಸಿ ಈ ಲಾಭ ಪಡೆಯಿರಿ

ದಾಳಿಂಬೆ ಹಣ್ಣು ತಿನ್ನಲು ರುಚಿ ಮಾತ್ರವಲ್ಲ. ಕಫನಾಶಕ ಹಾಗೂ ಪಿತ್ತ ಶಮನಕಾರಿಯಾಗಿದೆ. ಪೌಷ್ಟಿಕಾಂಶಗಳ ಆಗರವಾಗಿರುವ ದಾಳಿಂಬೆ ಹಣ್ಣಿನ ಕೆಲವೊಂದು ಪ್ರಯೋಜನಗಳು ಇಲ್ಲಿವೆ.

ನೆನಪಿನ ಶಕ್ತಿ ಹಾಗೂ ಮೂತ್ರಪಿಂಡ ಆರೋಗ್ಯ : ದಾಳಿಂಬೆಯ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ನೆನಪಿನ ಶಕ್ತಿ ಚುರುಕಾಗುತ್ತದಲ್ಲದೆ, ಮೂತ್ರಪಿಂಡದ ಸಮಸ್ಯೆಗಳು ದೂರವಾಗುತ್ತವೆ.

ಹೃದಯ ಆರೋಗ್ಯ : ಅರ್ಧ ಕಪ್ ದಾಳಿಂಬೆ ಹಣ್ಣಿನ ಕಾಳುಗಳಿಗೆ ಚಿಟಿಕೆ ಉಪ್ಪು, ಕಾಲು ಚಮಚ ಕರಿಮೆಣಸಿನ ಕಾಳಿನ ಪುಡಿ ಬೆರೆಸಿ ಸೇವಿಸುವುದರಿಂದ ಆಯಾಸ ಪರಿಹಾರವಾಗುವುದರೊಂದಿಗೆ ಹೃದಯ ಬಲವರ್ಧಕವಾಗುವುದು.

ರೋಗ ನಿರೋಧಕ ಶಕ್ತಿ : 2 ವಾರಗಳ ಕಾಲ ನಿಯಮಿತವಾಗಿ ದಾಳಿಂಬೆ ರಸದ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ದಾಳಿಂಬೆ ಹಣ್ಣಿನ ಕಾಳುಗಳನ್ನು ಕೋಸಂಬರಿ ಹಾಗೂ ಸಾಲಡ್ ಗಳ ಜೊತೆ ಬೆರೆಸಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...