alex Certify ಪೋಸ್ಟ್‌ ಆಫೀಸ್‌ನ ಸೂಪರ್‌ ಸ್ಕೀಮ್‌: ಪ್ರತಿದಿನ 50 ರೂ. ಠೇವಣಿ ಇಟ್ರೆ ಪಡೆಯಬಹುದು 35 ಲಕ್ಷ ರೂಪಾಯಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಸ್ಟ್‌ ಆಫೀಸ್‌ನ ಸೂಪರ್‌ ಸ್ಕೀಮ್‌: ಪ್ರತಿದಿನ 50 ರೂ. ಠೇವಣಿ ಇಟ್ರೆ ಪಡೆಯಬಹುದು 35 ಲಕ್ಷ ರೂಪಾಯಿ…!

ಅಂಚೆ ಕಛೇರಿಯಲ್ಲಿ ಹಣ ಹಾಕಿದ್ರೆ ಅದನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ  ಪ್ರತಿ ಹೂಡಿಕೆಯಲ್ಲೂ ರಿಸ್ಕ್‌ ಇದ್ದೇ ಇರುತ್ತದೆ. ಇರುವುದರಲ್ಲಿ ಯಾವುದು ಬೆಸ್ಟ್‌ ಎಂಬುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಯೋಜನೆಗಳು ಪೋಸ್ಟ್‌ ಆಫೀಸ್‌ನಲ್ಲಿವೆ.

35 ಲಕ್ಷದ ಬಂಪರ್ ರಿಟರ್ನ್ ! ಪೋಸ್ಟ್ ಆಫೀಸ್‌ನ ಸಣ್ಣ ಉಳಿತಾಯ ಯೋಜನೆಗಳು ನಿಮಗೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಅಪಾಯದ ಅಂಶವೂ ಕಡಿಮೆ ಮತ್ತು ಅದೇ ಸಮಯದಲ್ಲಿ ಆದಾಯವೂ ಉತ್ತಮವಾಗಿರುತ್ತದೆ. ಅಂಚೆ ಕಛೇರಿಯ ‘ಗ್ರಾಮ ಸುರಕ್ಷಾ ಯೋಜನೆ’ ಕೂಡ ಅತ್ಯುತ್ತಮವಾಗಿದೆ. ಇದರಲ್ಲಿ ನೀವು ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕು. ಈ ಮೊತ್ತವನ್ನು ನಿಯಮಿತವಾಗಿ ಠೇವಣಿ ಮಾಡುವುದರಿಂದ ಕೊನೆಯಲ್ಲಿ ನಿಮಗೆ 31 ರಿಂದ 35 ಲಕ್ಷ ರೂಪಾಯಿಗಳ ರಿಟರ್ನ್‌ ಸಿಗುತ್ತದೆ.

ಹೂಡಿಕೆಯ ನಿಯಮ

19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ಈ ಯೋಜನೆಯಡಿಯಲ್ಲಿ ಕನಿಷ್ಠ ವಿಮಾ ಮೊತ್ತವು 10,000 ರಿಂದ 10 ಲಕ್ಷ ರೂಪಾಯಿ. ಯೋಜನೆಯ ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಮಾಡಬಹುದು. ಪ್ರೀಮಿಯಂ ಪಾವತಿಸಲು 30 ದಿನಗಳ ಸಮಯವಿರುತ್ತದೆ. ಈ ಯೋಜನೆಯಲ್ಲಿ ನೀವು ಸಾಲವನ್ನು ಸಹ ತೆಗೆದುಕೊಳ್ಳಬಹುದು. ಈ ಸ್ಕೀಮ್ ತೆಗೆದುಕೊಂಡ 3 ವರ್ಷಗಳ ನಂತರವೂ ನೀವು ಅದನ್ನು ಸರೆಂಡರ್ ಮಾಡಬಹುದು. ಆದರೆ ಬೆನಿಫಿಟ್ಸ್‌ ಸಿಗುವುದಿಲ್ಲ.

ಒಬ್ಬ ವ್ಯಕ್ತಿ 19 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 10 ಲಕ್ಷ ರೂಪಾಯಿಗಳ ಪಾಲಿಸಿಯನ್ನು ಖರೀದಿಸಿದರೆ, ಅವನ ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂಪಾಯಿ ಆಗುತ್ತದೆ. 58 ವರ್ಷಕ್ಕೆ 1463 ರೂಪಾಯಿ ಮತ್ತು 60 ವರ್ಷಕ್ಕೆ 1411 ರೂಪಾಯಿ ಆಗಿರುತ್ತದೆ. ಈ ಮೊತ್ತ ಪಾವತಿಸಿದ್ರೆ 55 ವರ್ಷಗಳಿಗೆ 31.60 ಲಕ್ಷ ರೂಪಾಯಿ ಸಿಗುತ್ತದೆ.  58 ವರ್ಷಗಳಿಗೆ 33.40 ಲಕ್ಷ ಮತ್ತು 60 ವರ್ಷಗಳಿಗೆ 34.60 ಲಕ್ಷ ರೂಪಾಯಿ ಮೆಚ್ಯುರಿಟಿ ಲಾಭವನ್ನು ಪಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...