alex Certify ಪೋಷಕರೇ ಗಮನಿಸಿ…! ಇಂದಿನಿಂದ ಪೂರ್ಣ ತರಗತಿ, LKG –UKG ಅಂಗನವಾಡಿ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಗಮನಿಸಿ…! ಇಂದಿನಿಂದ ಪೂರ್ಣ ತರಗತಿ, LKG –UKG ಅಂಗನವಾಡಿ ಆರಂಭ

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಎಲ್ಕೆಜಿ-ಯುಕೆಜಿ, ಅಂಗನವಾಡಿ ಆರಂಭವಾಗಲಿವೆ. ಒಂದರಿಂದ ಐದನೇ ತರಗತಿ ಮಕ್ಕಳಿಗೆ ಪೂರ್ಣ ತರಗತಿಗಳು ನಡೆಯಲಿವೆ.

ಅಂಗನವಾಡಿಗಳಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಕಾರ್ಯನಿರ್ವಹಿಸಲಿವೆ. ಎಲ್ಕೆಜಿ-ಯುಕೆಜಿಗೆ ಬೆಳಗ್ಗೆ 9.30 ರಿಂದ 3:30 ರವರೆಗೆ ತರಗತಿ ನಡೆಯಲಿವೆ. ಶಾಲೆಗೆ ಬರುವ ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರಬೇಕು. ಮನೆಯಿಂದಲೇ ಊಟ, ಉಪಹಾರ ತರಬೇಕು. ಜ್ವರ, ಕೆಮ್ಮು, ನೆಗಡಿ ಇದ್ದರೆ ಶಾಲೆಗೆ ಮಕ್ಕಳನ್ನು ಕಳುಹಿಸುವಂತಿಲ್ಲ. ಶಿಕ್ಷಕರು, ಸಿಬ್ಬಂದಿ ಪೋಷಕರಿಗೆ 2 ಡೋಸ್ ಲಸಿಕೆ ಕಡ್ಡಾಯವಾಗಿರುತ್ತದೆ.

ಮಕ್ಕಳ ಸುರಕ್ಷತೆಗೆ ಅಂಗನವಾಡಿ, ಶಾಲೆಯ ಆವರಣ, ಕೊಠಡಿ, ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಬೇಕು ಎಂದು ಈಗಾಗಲೇ ತಿಳಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರೆ ತಂಡಗಳನ್ನು ರಚಿಸಿ ದಿನ ಬಿಟ್ಟು ದಿನ ಕ್ಲಾಸ್ ಮಾಡಲು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...