alex Certify ‘ಪುಷ್ಪಾ -2’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪಾ -2’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪಾ ದಿ ರೈಸ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ತೆಲುಗು ಮಾತ್ರವಲ್ಲದೆ ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲೂ ಸಿನಿಮಾ ಸಖತ್ ಸದ್ದು ಮಾಡಿತ್ತು. ಹೀಗಾಗಿ ‘ಪುಷ್ಪಾ 2’ ಯಾವಾಗ ಬಿಡುಗಡೆಯಾಗುತ್ತದೋ ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಕಾದು ಕುಳಿತಿದ್ದು, ಇದೀಗ ಅವರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಹೌದು, ‘ಪುಷ್ಪಾ’ ಸಿನಿಮಾದ ಎರಡನೇ ಭಾಗ ‘ಪುಷ್ಪಾ – ದಿ ರೂಲ್’ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಇದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುತ್ತಿದ್ದಾರೆ.

ಈಗ ವೈರಲ್ ಆಗಿರುವ ಫೋಟೋದಲ್ಲಿ ಗಡ್ಡಧಾರಿಯಾಗಿರುವ ಅಲ್ಲು ಅರ್ಜುನ್ ಸಿನಿಮಾಟೋಗ್ರಾಫರ್ ಕುಬ ಬ್ರೊಜೆಕ್ ಅವರೊಂದಿಗಿದ್ದಾರೆ. ‘ಪುಷ್ಪಾ ದಿ ರೈಸ್’ ಸಿನಿಮಾ ಕುತೂಹಲ ಘಟ್ಟದಲ್ಲಿ ಕೊನೆಗೊಂಡಿದ್ದು, ಹೀಗಾಗಿ ‘ಪುಷ್ಪಾ ದಿ ರೂಲ್’ ಕುರಿತು ಬಹಳಷ್ಟು ನಿರೀಕ್ಷೆಗಳಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...