alex Certify ‘ಪುಷ್ಪಾ’ ಸ್ಟೈಲ್‌ ಫಾಲೋ ಮಾಡಿದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪುಷ್ಪಾ’ ಸ್ಟೈಲ್‌ ಫಾಲೋ ಮಾಡಿದ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿ

ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಸೋಶಿಯಲ್ ಮೀಡಿಯಾ ಟ್ರೆಂಡ್‌ಗಳನ್ನು ಇನ್ನಿಲ್ಲದಂತೆ ಹೆಚ್ಚಿಸಿದ್ದಾರೆ. ಅವರ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಗ್ರೂವಿಂಗ್‌ನಿಂದ ಹಿಡಿದು ಹಿಟ್ ಹಾಡುಗಳು ಅಥವಾ ಡೈಲಾಗ್‌ಗಳವರೆಗೆ, ವಾರ್ನರ್‌ ಅವರ ಇನ್ಸ್ಟಾಗ್ರಾಂ ಪುಟದಲ್ಲಿರುವ ವಿಡಿಯೋಗಳು ವಿನೋದಮಯವಾಗಿವೆ. ಇದೀಗ ವಾರ್ನರ್ ಹಂಚಿಕೊಂಡಿರುವ ವಿಡಿಯೋ ಭಾರತೀಯರ ಮನಗೆದ್ದಿದೆ.

ಕ್ರಿಕೆಟಿಗ ವಾರ್ನರ್ ಇತ್ತೀಚೆಗೆ ತಮ್ಮ ಮಗಳು ಪುಷ್ಪಾ: ದಿ ರೈಸ್ ಚಿತ್ರದ ʼಝುಕೆಗಾ ನಹಿʼ ಅನ್ನು ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತವನ್ನು ತೊರೆದಾಗಿನಿಂದ ಮಗು ಇದನ್ನು ತಡೆರಹಿತವಾಗಿ ಮಾಡುತ್ತಿದೆ ಎಂದು ಅವರು ನಗುವ ಎಮೋಜಿ ಮತ್ತು ಪುಷ್ಪಾ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಬರೆದಿದ್ದಾರೆ.

ವಾರ್ನರ್‌ ಪುತ್ರಿ ಸುಂದರವಾದ ಗುಲಾಬಿ ಬಣ್ಣದ ಫ್ರಾಕ್‌ ಧರಿಸಿದ್ದು, ಅಲ್ಲು ಅರ್ಜುನ್ ಮಾಡಿದಂತೆ ಬಾಲಕಿ ಕೂಡ ತನ್ನ ಗಲ್ಲದಿಂದ ಕೈಯನ್ನು ಕತ್ತಿ ಮಸೆಯುವ ರೀತಿಯಲ್ಲಿ ಮಾಡಿದ್ದಾಳೆ.

ಸೋಮವಾರ ಪೋಸ್ಟ್ ಮಾಡಲಾದ ಈ ವಿಡಿಯೋ 3 ಮಿಲಿಯನ್ ವೀಕ್ಷಣೆಗಳು, 6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳು ಮತ್ತು ಟನ್‌ಗಳಷ್ಟು ಕಾಮೆಂಟ್‌ಗಳನ್ನು ಸಂಗ್ರಹಿಸಿದೆ. ಇನ್ಸ್ಟಾಗ್ರಾಂ ಬಳಕೆದಾರರು ಬಾಲಕಿಯನ್ನು ಪುಷ್ಪಾ ವಾರ್ನರ್ ಎಂದು ಹೆಸರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...