alex Certify ಪುಷ್ಪಾ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಸ್ಟೆಪ್ಸ್ ಹಾಕಿದ ಕಿಲಿಪೌಲ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಪಾ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಸ್ಟೆಪ್ಸ್ ಹಾಕಿದ ಕಿಲಿಪೌಲ್: ವಿಡಿಯೋ ವೈರಲ್

ನೀವು ಇನ್ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದರೆ, ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಅವರ ಹಲವಾರು ವಿಡಿಯೋಗಳನ್ನು ನೀವು ನೋಡಿರಬಹುದು. ಅವರು ಜನಪ್ರಿಯ ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ಮತ್ತು ನೃತ್ಯ ಮಾಡುವ ಮೂಲಕ ಭಾರತದಲ್ಲಿ ವೈರಲ್ ಸೆನ್ಸೇಷನ್ ಆಗಿದ್ದಾರೆ.

ಇದೀಗ 2021 ರ ಬ್ಲಾಕ್‌ಬಸ್ಟರ್ ತೆಲುಗು ಚಲನಚಿತ್ರ ‘ಪುಷ್ಪಾ’ದತ್ತ ಅವರು ವಿಶೇಷ ಆಸಕ್ತಿಯನ್ನು ತೋರಿಸಿದ್ದಾರೆ. ಈ ಸಿನಿಮಾದ ‘ಸಾಮಿ ಸಾಮಿ’ ಮತ್ತು ‘ಊ ಅಂಟಾವ’ ನಂತಹ ಹಾಡುಗಳಿಗೆ ಸ್ಟೆಪ್ಸ್ ಹಾಕಿದ್ದಾರೆ. ಜೊತೆಗೆ ನಟ ಅಲ್ಲು ಅರ್ಜುನ್ ಅವರ ಪವರ್ ಫುಲ್ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವ ಮುಖಾಂತರ ಕೂಡ ಸುದ್ದಿಯಾಗಿದ್ದಾರೆ.

ಕೆಲವು ವಾರಗಳ ಹಿಂದೆ ಸಾಮಿ ಸಾಮಿ ಹಾಡಿಗೆ ಸ್ಟೆಪ್ಸ್ ಹಾಕಿದ ಕಿಲಿ ಪೌಲ್ ಅವರ ವಿಡಿಯೋವನ್ನು  1.5 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಚಿತ್ರದ ಹಾಡು ಮತ್ತು ನೃತ್ಯದ ಇನ್ನೂ ಟ್ರೆಂಡಿಂಗ್‌ನಲ್ಲಿದ್ದು, ಪುಷ್ಪಾ ಸಿನಿಮಾದ ಅಲ್ಲು ಅರ್ಜುನ್‌ರ ಪ್ರಸಿದ್ಧ ನೃತ್ಯ ಹೆಜ್ಜೆಯನ್ನು ಅನುಕರಿಸಿದ್ದಾರೆ. ಇದನ್ನು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಿದ್ದು, ಈಗಾಗಲೇ 1.28 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...