alex Certify ಪುರುಷರ ಸೂಟ್‌ ತೋಳುಗಳಲ್ಲಿ 3 ಬಟನ್‌ ಯಾಕಿಡ್ತಾರೆ ಗೊತ್ತಾ ? ಅಚ್ಚರಿ ಹುಟ್ಟಿಸುತ್ತೆ ಈ ವಿಚಿತ್ರ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರ ಸೂಟ್‌ ತೋಳುಗಳಲ್ಲಿ 3 ಬಟನ್‌ ಯಾಕಿಡ್ತಾರೆ ಗೊತ್ತಾ ? ಅಚ್ಚರಿ ಹುಟ್ಟಿಸುತ್ತೆ ಈ ವಿಚಿತ್ರ ಕಾರಣ

ಕೆಲವೊಂದು ವಿಶಿಷ್ಟ ಸಂಗತಿಗಳನ್ನು ನಮ್ಮ ಕಣ್ಣ ಮುಂದೇಯೇ ಇದ್ದರೂ ನಾವು ಗಮನಿಸುವುದೇ ಇಲ್ಲ. ಅವುಗಳ ಹಿಂದಿರುವ ರಹಸ್ಯಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ. ಪಾರ್ಟಿ, ಫಂಕ್ಷನ್‌ಗಳಲ್ಲಿ ಪುರುಷರು ಧರಿಸುವ ಸೂಟ್‌ ಕೂಡ ಇವುಗಳಲ್ಲೊಂದು.

ಸಾಮಾನ್ಯವಾಗಿ ಸೂಟ್‌ಗಳನ್ನೆಲ್ಲ ಒಂದೇ ಶೈಲಿಯಲ್ಲಿ ಹೊಲಿದಿರುತ್ತಾರೆ. ಈ ಸೂಟ್‌ಗಳ ತೋಳಿನ ತುದಿಯಲ್ಲಿ ಮೂರು ಬಟನ್‌ಗಳಿರುವುದನ್ನು ನೀವು ಕೂಡ ಗಮನಿಸಿರಬಹುದು. ಈ ಮೂರು ಗುಂಡಿಗಳ ಹಿಂದೆ ಎರಡು ವಿಶೇಷ ಕಾರಣಗಳು ಅಡಗಿವೆ. ಅದೇನು ಅನ್ನೋದನ್ನು ನೀವು ಯೋಚಿಸಿಯೇ ಇರಲಿಕ್ಕಿಲ್ಲ.

ರಾಣಿ ಎಲಿಜಬೆತ್ I ರ ಸಮಯದಿಂದ ಬ್ಲೇಜರ್ಸ್ ಪ್ರಾರಂಭವಾಯಿತು. ಆಗ ಸೈನಿಕರು ಇಂತಹ ಬ್ಲೇಜರ್ ಗಳನ್ನು ಧರಿಸುತ್ತಿದ್ದರು. ಸೂಟ್‌ನ ತೋಳಿನಲ್ಲಿ 3 ಬಟನ್‌ಗಳನ್ನು ಹಾಕಿದರೆ ಸೈನಿಕರ ಸ್ವಚ್ಛತೆ ಮತ್ತವರ ಬಗೆಗಿನ ಅನಿಸಿಕೆ ಹೆಚ್ಚಾಗುತ್ತದೆ ಎಂದು ನಂಬಲಾಗಿತ್ತು.

ಸ್ಲೀವ್‌ನಲ್ಲಿ 3 ಬಟನ್‌ಗಳಿರುವುದಕ್ಕೂ ಸ್ವಚ್ಛತೆಗೂ ಏನು ಸಂಬಂಧ ಎಂಬ ಪ್ರಶ್ನೆ ಕಾಡುವುದು ಸಹಜ. ಈ ಮೂರು ಬಟನ್‌ಗಳಿರುವುದರಿಂದ ಸೈನಿಕರು ತಮ್ಮ ಬಾಯಿ ಅಥವಾ ಮೂಗನ್ನು ಸ್ವಚ್ಛಗೊಳಿಸಲು ತೋಳುಗಳನ್ನು ಬಳಸುವುದಿಲ್ಲ. ಹಾಗಾಗಿ ಸೂಟ್‌ ಸ್ವಚ್ಛವಾಗಿರುತ್ತದೆ ಜೊತೆಗೆ ಸೈನಿಕರು ತಮ್ಮ ಸಮವಸ್ತ್ರವನ್ನು ಗೌರವಿಸಲು ಕಲಿಯುತ್ತಾರೆ ಎಂಬ ನಂಬಿಕೆಯಿಂದ ಬಟನ್‌ಗಳನ್ನು ಇಡಲಾಗುತ್ತಿತ್ತು.

ಮೂರು ಗುಂಡಿಗಳು ಸೈನಿಕರ ಸಮವಸ್ತ್ರವನ್ನು ಸ್ವಚ್ಛವಾಗಿಡುತ್ತವೆ. ಅಕಸ್ಮಾತ್‌ ಗುಂಡಿಗಳಿಲ್ಲದೇ ಇದ್ದರೆ ಅವುಗಳಿಂದಲೇ ಸೈನಿಕರು ಬಾಯಿ, ಮೂಗು ಒರೆಸಿಕೊಂಡಿದ್ದರೆ ಯೋಧರ ಬಗ್ಗೆ ಜನರು ಹಗುರವಾಗಿ ಮಾತನಾಡಲು ಅವಕಾಶವಾಗುತ್ತಿತ್ತು. ಸೈನಿಕರ ಬಗೆಗಿನ ಗೌರವಕ್ಕೆ ಚ್ಯುತಿ ಬರುವ ಅಪಾಯವಿತ್ತು. ಅದನ್ನು ಈ ಬಟನ್‌ಗಳು ತಪ್ಪಿಸಿವೆ. ಮೂರು ಗುಂಡಿಗಳನ್ನು ಇಡಲು ಮತ್ತೊಂದು ಕಾರಣವೆಂದರೆ ಅಗತ್ಯ ಬಿದ್ದಲ್ಲಿ ಸೂಟ್‌ನ ತೋಳುಗಳನ್ನು ಸಡಿಲಗೊಳಿಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಸೂಟ್‌ನ ಸ್ಲೀವ್‌ನಲ್ಲಿರುವ ಬಟನ್‌ಗಳು ಕೇವಲ ಫ್ಯಾಷನ್‌ಗೆ ಸೀಮಿತವಾಗಿವೆ. ತೆಗೆದು ಹಾಕಿ ಮಾಡಲು ಸಾಧ್ಯವಿಲ್ಲದ ಕೇವಲ ಫ್ಯಾಷನ್‌ಗೆ ಸೂಕ್ತವಾದ ಬಟನ್‌ಗಳನ್ನು ಈಗ ಅಳವಡಿಸಲಾಗುತ್ತದೆ. ಮೂರಕ್ಕಿಂತ ಹೆಚ್ಚು ಬಟನ್ ಗಳಿರುವ ಸೂಟ್‌ಗಳು ಕೂಡ ಫ್ಯಾಷನ್‌ನಲ್ಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...