alex Certify ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಜಂಕ್‌ ಫುಡ್‌ ತಿನ್ನುವ ಕಡುಬಯಕೆ, ಕಾರಣ ಗೊತ್ತಾ……? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಜಂಕ್‌ ಫುಡ್‌ ತಿನ್ನುವ ಕಡುಬಯಕೆ, ಕಾರಣ ಗೊತ್ತಾ……?

ಹಸಿವಾದಾಗ ಏನನ್ನಾದರೂ ತಿನ್ನಬೇಕು ಎನಿಸುವುದು ಸಹಜ. ಕೆಲವೊಮ್ಮೆ ಹೊಟ್ಟೆ ತುಂಬಿದ ಮೇಲೂ ಮನಸ್ಸು ಏನಾದರೂ ತಿನ್ನಲು ಹಂಬಲಿಸುತ್ತದೆ. ಇದನ್ನು ಕ್ರೇವಿಂಗ್ ಎಂದು ಕರೆಯಲಾಗುತ್ತದೆ. ಇದಕ್ಕೆ ದೈಹಿಕ ಮತ್ತು ಮಾನಸಿಕ ಕಾರಣಗಳಿರಬಹುದು. ತಜ್ಞರ ಪ್ರಕಾರ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಕಡುಬಯಕೆ ಇರುತ್ತದೆ. ಈ ಕಾರಣದಿಂದಲೇ ಅವರ ದೇಹದಲ್ಲಿ ಅನಾರೋಗ್ಯಕರ ಲಕ್ಷಣಗಳು ಹೆಚ್ಚು ಗೋಚರಿಸುತ್ತದೆ.

ಮಹಿಳೆಯರಿಗೆ ಕ್ರೇವಿಂಗ್‌ ಹೆಚ್ಚಾಗಿರುವುದೇಕೆ?

ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಜಂಕ್, ಮಸಾಲೆಯುಕ್ತ ಅಥವಾ ಸಂಸ್ಕರಿಸಿದ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಇದಕ್ಕೆ ಕಾರಣ ಅವರ ದಿನಚರಿಯಲ್ಲಿನ ಏರಿಳಿತಗಳು. ಪ್ರತಿ ತಿಂಗಳೂ ಬರುವ ಮುಟ್ಟು, ಗರ್ಭಾವಸ್ಥೆ ಮತ್ತು ನಂತರದ ಋತುಬಂಧವು ಮಹಿಳೆಯರಲ್ಲಿ ಹಾರ್ಮೋನ್ ಏರಿಳಿತಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ತಿನಿಸುಗಳ ವಿಚಾರದಲ್ಲೂ ಕಡುಬಯಕೆ ಹೆಚ್ಚಾಗಿರುತ್ತದೆ.

ಆರೋಗ್ಯಕರ-ಅನಾರೋಗ್ಯಕರ ಕಡುಬಯಕೆಗಳಿಗೆ ಕಾರಣ

ಗರ್ಭಾವಸ್ಥೆ

ಗರ್ಭಾವಸ್ಥೆಯಲ್ಲಿ ಸಂಭವಿಸುವ ಹಾರ್ಮೋನುಗಳ ಬದಲಾವಣೆಯಿಂದಾಗಿ ವಾಸನೆ ಮತ್ತು ರುಚಿಯಲ್ಲಿ ವ್ಯತ್ಯಾಸವಾಗಬಹುದು. ಈ ಸಮಯದಲ್ಲಿ ಗರ್ಭಿಣಿಯರಿಗೆ ಏನಾದರೂ ತಿನ್ನಬೇಕೆಂದು ಅನಿಸುತ್ತದೆ. ಬಯಕೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ.

ಪ್ರೀ ಮೆನ್ಸ್‌ಸ್ಟ್ರುವಲ್‌ ಸಿಂಡ್ರೋಮ್

ಋತುಚಕ್ರದ ಮೊದಲು ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಬದಲಾವಣೆಯಾಗುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವ ದೇಹದ ಹಂಬಲವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ನಿದ್ರೆಯ ಕೊರತೆ

ಮಲಗಲು ಪ್ರಯತ್ನಿಸಿದಾಗಲೆಲ್ಲಾ ನಿದ್ರೆ ಬರುವುದಿಲ್ಲ. ಕೆಲವೊಮ್ಮೆ ನಿದ್ದೆ ತೃಪ್ತಿದಾಯಕವಾಗಿರುವುದಿಲ್ಲ. ನಿದ್ರೆಗೆ ಕಾರಣವಾದ ಹಾರ್ಮೋನುಗಳಲ್ಲಿ ಏರಿಳಿತವಾಗಬಹುದು. ಈ ರೀತಿಯ ನಿದ್ದೆ ಸಮಸ್ಯೆ ಕೂಡ ಕ್ರೇವಿಂಗ್‌ ಹೆಚ್ಚಿಸುತ್ತದೆ.

ಅತಿಯಾದ ಒತ್ತಡ

ಒತ್ತಡವು ದೇಹದಲ್ಲಿ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚುವರಿ ಕಾರ್ಟಿಸೋಲ್ ಹಸಿವು, ಕಡುಬಯಕೆ, ಏನನ್ನಾದರೂ ತಿಳಿದುಕೊಳ್ಳುವ ಕುತೂಹಲವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ನಾವು ನಮ್ಮನ್ನು ನಿಯಂತ್ರಿಸಿಕೊಳ್ಳಬೇಕು. ಪುರುಷರಿಗಿಂತ ಮಹಿಳೆಯರಿಗೆ ಏನನ್ನಾದರೂ ತಿನ್ನುವ ಬಯಕೆ ಹೆಚ್ಚು. ಈ ಕಾರಣಕ್ಕಾಗಿ ಅವರು ಅನಾರೋಗ್ಯಕರ ತಿನಿಸುಗಳನ್ನು ತಿನ್ನುತ್ತಾರೆ. ಇದನ್ನು ನಿಲ್ಲಿಸಲು ಮನಸ್ಸಿನ ಸಮತೋಲನ ಅವಶ್ಯಕ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...