alex Certify ಪುಟ್ಟ ಮಗುವನ್ನು ಕಿಡ್ನಾಪ್‌ ಮಾಡಿ ಪರಾರಿಯಾಗುತ್ತಿತ್ತು ಮಂಗ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗುವನ್ನು ಕಿಡ್ನಾಪ್‌ ಮಾಡಿ ಪರಾರಿಯಾಗುತ್ತಿತ್ತು ಮಂಗ; ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ…..!

ಮಕ್ಕಳನ್ನು ದುಷ್ಕರ್ಮಿಗಳು ಅಪಹರಿಸೋದನ್ನು ಕೇಳಿರ್ತೀರಾ. ಆದ್ರೆ ಇಲ್ಲೊಂದು ಕೋತಿ ಮನೆ ಮುಂದೆ ಆಟವಾಡ್ತಿದ್ದ ಮೂರು ವರ್ಷದ ಮಗುವನ್ನು ಕಿಡ್ನಾಪ್‌ ಮಾಡಲು ಪ್ರಯತ್ನಿಸಿದೆ. ಏಪ್ರಿಲ್‌ 19ರಂದು ನಡೆದ ಘಟನೆ ಇದು. ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಗಳು ಎಂಥವರನ್ನೂ ಬೆಚ್ಚಿ ಬೀಳಿಸುವಂತಿವೆ.

ಚೀನಾದ ಚೆಂಗಾಕ್ವಿನ್‌ ಎಂಬಲ್ಲಿ ನಡೆದಿರೋ ಪ್ರಕರಣ ಇದು. ಮಗು ತನ್ನ ಸ್ಕೂಟರ್‌ ತೆಗೆದುಕೊಂಡು ರಸ್ತೆಯಲ್ಲಿ ಆಟವಾಡುತ್ತಿತ್ತು. ಇದ್ದಕ್ಕಿದ್ದಂತೆ ಖತರ್ನಾಕ್‌ ಕೋತಿಯೊಂದು ಅಲ್ಲಿ ಪ್ರತ್ಯಕ್ಷವಾಗಿದೆ. ಮಗುವಿಗೆ ಒಂದೇಟು ಹೊಡೆದಿದೆ. ನಂತರ ಬಾಲಕಿಯನ್ನು ಹಿಡಿದು ಎಳೆದೊಯ್ಯಲು ಶುರು ಮಾಡಿದೆ.

ಮಂಗನ ಕೃತ್ಯದಿಂದ ಹೆದರಿದ ಮಗು ಜೋರಾಗಿ ಕಿರುಚಿಕೊಂಡು ಅಳಲಾರಂಭಿಸಿತ್ತು. ಅಳುವ ಶಬ್ಧ ಕೇಳಿ ಲಿಯು ಎಂಬ ವ್ಯಕ್ತಿ ಅಲ್ಲಿಗೆ ಓಡಿ ಬಂದಿದ್ದಾನೆ. ಮಂಗ ಎಳೆದೊಯ್ತಾ ಇದ್ದ ಮಗುವನ್ನು ರಕ್ಷಣೆ ಮಾಡಿದ್ದಾನೆ. ಈ ವೇಳೆ ಕಿಡ್ನಾಪರ್‌ ಕೋತಿ ಆತನ ಮುಖಕ್ಕೂ ಪರಚಿದೆ.

ಗ್ರಾಮದ ಸಮೀಪದಲ್ಲೇ ದೊಡ್ಡ ಅರಣ್ಯವಿದ್ದು, ಕೋತಿಗಳ ಹಿಂಡೇ ಅಲ್ಲಿ ಬೀಡುಬಿಟ್ಟಿದೆ ಎನ್ನಲಾಗ್ತಾ ಇದೆ. ಮಗುವನ್ನು ಕಿಡ್ನಾಪ್‌ ಮಾಡಲು ಯತ್ನಿಸಿದ ಮಂಗಣ್ಣನಿಗಾಗಿ ಅರಣ್ಯ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...