alex Certify ಪಿಸ್ತಾ ಅತಿ ಹೆಚ್ಚು ಸೇವನೆಯಿಂದ ಆರೋಗ್ಯದ ಮೇಲಾಗಬಹುದು ಗಂಭೀರ ಪರಿಣಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಸ್ತಾ ಅತಿ ಹೆಚ್ಚು ಸೇವನೆಯಿಂದ ಆರೋಗ್ಯದ ಮೇಲಾಗಬಹುದು ಗಂಭೀರ ಪರಿಣಾಮ

ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು ಅನ್ನೋ ಕಾರಣಕ್ಕೆ ನಾವು ಡ್ರೈಫ್ರೂಟ್ಸ್‌ ತಿನ್ನುತ್ತೇವೆ. ಬಾದಾಮಿ, ಒಣದ್ರಾಕ್ಷಿ, ವಾಲ್ನಟ್‌, ಪಿಸ್ತಾ ಇವೆಲ್ಲ ನಮ್ಮ ನಿಮ್ಮೆಲ್ಲರ ಫೇವರಿಟ್.‌ ಸಿಹಿ ತಿಂಡಿಗಳಿಗೂ ಇವುಗಳನ್ನು ಬಳಸಲಾಗುತ್ತದೆ.

ಇವುಗಳ ಪ್ರಯೋಜನಗಳ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು.  ಆದರೆ ಡ್ರೈಫ್ರೂಟ್ಸ್‌ ಸೇವನೆಯಿಂದ ಅನಾನುಕೂಲವೂ ಇದೆ. ಅನೇಕ ಜನರಿಗೆ ಇದು ಹಾನಿಕಾರಕವೆಂದು ಸಾಬೀತಾಗಿದೆ. ಅದರಲ್ಲೂ ಅತಿಯಾಗಿ ಪಿಸ್ತಾ ತಿಂದರೆ ತೊಂದರೆ ತಪ್ಪಿದ್ದಲ್ಲ.

ತೂಕ ಹೆಚ್ಚಾಗುತ್ತದೆ

ಪಿಸ್ತಾ ತಿನ್ನುವುದರಿಂದ ತೂಕ ತುಂಬಾ ಹೆಚ್ಚುತ್ತದೆ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಅದರಿಂದ ದೂರವಿರುವುದು ಉತ್ತಮ. ಪಿಸ್ತಾ ತಿನ್ನಲೇಬೇಕೆಂಬ ಆಸೆಯಿದ್ದರೆ 1-2 ಪಿಸ್ತಾವನ್ನು ಮಾತ್ರ ತಿನ್ನಿ. ಇದರಿಂದ ನಿಮ್ಮ ತೂಕದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ರಕ್ತದೊತ್ತಡ ನಿಯಂತ್ರಣದಲ್ಲಿರುವುದಿಲ್ಲ

ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಅನೇಕ ಜನರಲ್ಲಿ ಕಂಡುಬರುತ್ತಿದೆ. ಬಿಪಿ ಸಮಸ್ಯೆ ಇದ್ದವರು ಪಿಸ್ತಾ ತಿಂದರೆ ಅವರಿಗೆ ಸಮಸ್ಯೆ ಆಗಬಹುದು. ಏಕೆಂದರೆ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಇರುತ್ತದೆ. ರಕ್ತದೊತ್ತಡ ಹೆಚ್ಚಿರುವವರು ಅತಿಯಾಗಿ ಉಪ್ಪು ತಿನ್ನಬಾರದು. ಅವರಿಗೆ ಹೃದಯದ ತೊಂದರೆಯೂ ಕಾಣಿಸಿಕೊಳ್ಳಬಹುದು.

ಉಸಿರಾಟದ ತೊಂದರೆ

ಯಾವುದನ್ನಾದರೂ ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಅದೇ ರೀತಿ  ಹೆಚ್ಚು ಪಿಸ್ತಾ ತಿನ್ನುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದರಲ್ಲಿ ಪ್ರೊಟೀನ್ ಇರುವುದರಿಂದ ಇದನ್ನು ಹೆಚ್ಚು ತಿಂದಾಗ ರಕ್ತದಲ್ಲಿ ಪ್ರೋಟೀನ್ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಇದಲ್ಲದೆ, ಅಲರ್ಜಿ ಸಮಸ್ಯೆಯೂ ಬರಬಹುದು. ಪಿಸ್ತಾವನ್ನು ಜಾಸ್ತಿ ತಿಂದರೆ ದೇಹದಲ್ಲಿ ತುರಿಕೆ, ದದ್ದು ಮುಂತಾದ ಅಲರ್ಜಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...