alex Certify ಪಿಎಂ ಭದ್ರತಾದಳಕ್ಕೆ ಹೊಸ ಸೇರ್ಪಡೆ..! ಈ ವಾಹನದ ವಿಶೇಷತೆ ಏನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಎಂ ಭದ್ರತಾದಳಕ್ಕೆ ಹೊಸ ಸೇರ್ಪಡೆ..! ಈ ವಾಹನದ ವಿಶೇಷತೆ ಏನು ಗೊತ್ತಾ…?

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಡೀ ವಿಶ್ವದಲ್ಲೆ ಅತ್ಯಂತ ಉನ್ನತ ಮಟ್ಟದ ಸೆಕ್ಯುರಿಟಿ ಇದೆ. ಇದೀಗ ಈ ಭದ್ರತಾ ದಳದಲ್ಲಿ ಮತ್ತೊಂದು ಅಪ್ಡೇಟ್ ಆಗಿದ್ದು, ದುಬಾರಿ ಶಸ್ತ್ರಸಜ್ಜಿತ ವಾಹನದ ಸೇರ್ಪಡೆಯಾಗಿದೆ. ಈಗಾಗಲೇ ರೇಂಜ್ ರೋವರ್ ಹಾಗೂ ಲ್ಯಾಂಡ್ ಕ್ರ್ಯೂಸರ್ ವಾಹನಗಳು ಪಿಎಂ ಭದ್ರತಾ ದಳದಲ್ಲಿವೆ. ಈ ದಳಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದು ಮರ್ಸಿಡೀಸ್-ಮೇಬ್ಯಾಕ್ S650 ವರ್ಷನ್.

ಭಾರತ ಪ್ರವಾಸಕ್ಕೆ ಬಂದಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸ್ವಾಗತಿಸುವಾಗ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮೋದಿ ಅವರು ಹೊಸ ಕಾರಿನೊಂದಿಗೆ ಮೊದಲು ಕಾಣಿಸಿಕೊಂಡರು. ಈ ವಾಹನವು ಇತ್ತೀಚೆಗೆ ಮೋದಿಯವರ ರ್ಯಾಲಿಯ ಬೆಂಗಾವಲು ಪಡೆಯಲ್ಲಿ ಕಾಣಿಸಿಕೊಂಡಿತು. VR10-ಮಟ್ಟದ ರಕ್ಷಣೆಯೊಂದಿಗೆ ಪ್ರಮಾಣೀಕರಿಸಲ್ಪಟ್ಟಿರುವ, ಮರ್ಸಿಡಿಸ್-ಮೇಬ್ಯಾಕ್ S650 ಗಾರ್ಡ್ ಸದ್ಯ ಉತ್ಪಾದನೆಯಾಗುತ್ತಿರುವ ಅತ್ಯಂತ ಉನ್ನತ ಮಟ್ಟದ ರಕ್ಷಣೆ ನೀಡುವ ವಾಹನ ಎಂದು ಹೇಳಲಾಗುತ್ತದೆ.

11 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್​

ವರದಿಯ ಪ್ರಕಾರ, ಕಾರಿನ ಕಿಟಕಿಗಳನ್ನು ಪಾಲಿಕಾರ್ಬೊನೇಟ್‌ನಿಂದ ಲೇಪಿಸಲಾಗಿದ್ದು, ಗಟ್ಟಿಯಾದ ಸ್ಟೀಲ್ ಕೋರ್ ಬುಲೆಟ್‌ಗಳನ್ನು ತಡೆದುಕೊಳ್ಳುವ ಕ್ಷಮತೆಯಿದೆ. ಮರ್ಸಿಡಿಸ್ ನ ಈ ಮಾಡೆಲ್ 2010 ರ ಎಕ್ಸ್ ಪ್ಲೋಷನ್ ಪ್ರೂಫ್ ವೆಹಿಕಲ್ (ERV) ರೇಟಿಂಗ್ ಅನ್ನು ಪಡೆದುಕೊಂಡಿದೆ. ಅಂದರೆ ಕೇವಲ 2 ಮೀಟರ್ ದೂರದಲ್ಲಿ 15kg TNT ಸ್ಫೋಟವಾದರು ಪ್ರಯಾಣಿಕರನ್ನು ರಕ್ಷಿಸುವ ಸಾಮರ್ಥ್ಯ ಈ ವಾಹನಕ್ಕಿದೆ. ನೇರ ಸ್ಫೋಟಗಳಿಂದ ಪ್ರಯಾಣಿಕರನ್ನು ರಕ್ಷಿಸಲು ವಾಹನದ ಕೆಳಗಿನ ಭಾಗವು ಹೆಚ್ಚು ಶಸ್ತ್ರಸಜ್ಜಿತವಾಗಿದೆ. ಗ್ಯಾಸ್ ದಾಳಿಯ ಸಂದರ್ಭದಲ್ಲಿ ಕ್ಯಾಬಿನ್ ಪ್ರತ್ಯೇಕ ವಾಯು ಪೂರೈಕೆಯನ್ನು ಸಹ ಪಡೆಯುತ್ತದೆ. ಕಾರಿನಲ್ಲಿ ವಿಶೇಷ ರನ್-ಫ್ಲಾಟ್ ಟೈರ್‌ಗಳನ್ನು ಅಳವಡಿಸಲಾಗಿದೆ, ಇದು ಹಾನಿ ಅಥವಾ ಪಂಕ್ಚರ್ ಸಂದರ್ಭದಲ್ಲಿ ತ್ವರಿತವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ.

S650 ಗಾರ್ಡ್ 6.0 ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನಿಂದ ಚಾಲಿತವಾಗಿದೆ. ಈ ವಾಹನದ ಗರಿಷ್ಠ ವೇಗವು 160kmph ಗೆ ಸೀಮಿತವಾಗಿದೆ. ಕಳೆದ ವರ್ಷ ಭಾರತದಲ್ಲಿ S600 ಗಾರ್ಡ್ ಅನ್ನು 10.5 ಕೋಟಿ ರೂಪಾಯಿಗಳಿಗೆ ಬಿಡುಗಡೆ ಮಾಡಿತ್ತು, S650 ಗೆ 12 ಕೋಟಿ ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗಬಹುದು. ಆದರೆ, ಪ್ರಧಾನಿಗಾಗಿ ಮಾರ್ಪಡಿಸಿರುವ ಈ ವಾಹನದ ಬೆಲೆಯ ಮಾಹಿತಿ ತಿಳಿದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...