alex Certify ಹುಲಿ ಹಿಡಿಯಲು ಹೆಲಿಕಾಪ್ಟರ್ ನಲ್ಲಿ ಬಂದು ಪೆಚ್ಚಾದ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ಹಿಡಿಯಲು ಹೆಲಿಕಾಪ್ಟರ್ ನಲ್ಲಿ ಬಂದು ಪೆಚ್ಚಾದ ಪೊಲೀಸ್

ಲಾಕ್ಡೌನ್ ಸಂದರ್ಭದಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇಲ್ಲೊಂದು ಪ್ರಕರಣದಲ್ಲಿ ಹುಲಿಯೊಂದು ಬಂದಿದೆ ಎಂಬ ಮಾಹಿತಿ ಬೆನ್ನಟ್ಟಿ ಹೆಲಿಕ್ಯಾಪ್ಟರ್ ಸಹಿತ ಶಸ್ತ್ರ ಸಜ್ಜಿತರಾಗಿ ಸ್ಥಳಕ್ಕೆ ಬಂದಿಳಿದು ಅವಾಕ್ಕಾದ ಪ್ರಕರಣವೊಂದು ಯುಕೆಯಲ್ಲಿ ನಡೆದಿದೆ.

ಯುಕೆಯ ಕೆಂಟ್ ಪ್ರದೇಶದಲ್ಲಿ ಹುಲಿಯೊಂದು ಕಾಣಿಸಿಕೊಂಡಿದೆ ಎಂದು ಪಾದಚಾರಿಯೊಬ್ಬರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣವೇ ಜಾಗೃತರಾದ ಪೊಲೀಸರು ಶಸ್ತ್ರ ಸಜ್ಜಿತರಾಗಿ ಅಲ್ಲಿಗೆ ಹಾಜರಾದರು.

ಆದರೆ, ಅಲ್ಲಿ ಇದ್ದಿದ್ದು ಹುಲಿಯ ಕಲಾಕೃತಿ. ಜೂಲಿಯೆಟ್ ಸಿಂಪ್ಸನ್ ಎಂಬಾತ ಎರಡು ದಶಕದ ಹಿಂದೆ ಜಾಲರಿ ಮತ್ತು ರಾಳ ಬಳಸಿ ಹುಲಿಯ ಕಲಾಕೃತಿ ಮಾಡಿದ್ದ. ಅದನ್ನು ಮನೆ ಮುಂದಿನ ಅಂಗಳದಲ್ಲಿ ಇಡಲಾಗಿತ್ತು. ಪಾದಚಾರಿ ಮಾರ್ಗದಿಂದ ಸರಿ ಸುಮಾರು 30 ಮೀಟರ್ ದೂರದಲ್ಲಿ ಇದು ಇತ್ತು.‌ ಜೂಲಿಯೆಟ್ ಸಿಂಪ್ಸನ್ ಕುಟುಂಬದವರು ಈ ಸಂಗತಿಯನ್ನು ಜಾಲತಾಣದಲ್ಲಿ ಫೋಟೋ ಸಹಿತ ಹರಿಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...