alex Certify ಪಾರ್ಶ್ವವಾಯುವಿನ ನಂತರ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಶ್ವವಾಯುವಿನ ನಂತರ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಈ ವ್ಯಕ್ತಿ

Because of his pureed diet, a stroke victim's tongue turns BLACK and 'HAIRY .'ಪಾರ್ಶ್ವವಾಯುವಿಗೆ ಒಳಗಾದ ಜನರು ಅಸಂಯಮ ವರ್ತನೆ, ಮಾತು/ಭಾಷಾ ಸಮಸ್ಯೆಗಳು, ನುಂಗುವ ಅಥವಾ ತಿನ್ನುವ ಸಮಸ್ಯೆಗಳು, ದೌರ್ಬಲ್ಯ ಮುಂತಾದ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಬಹುದು. ಆದರೆ, ನಿಗೂಢ ಪ್ರಕರಣವೊಂದರಲ್ಲಿ ಪಾರ್ಶ್ವವಾಯುವಿಗೆ ಒಳಗಾದ ನಂತರ ವ್ಯಕ್ತಿಯೊಬ್ಬರ ನಾಲಿಗೆಯಲ್ಲಿ ಕಪ್ಪು ಕೂದಲುಗಳಾಗಿರೋ ಅಚ್ಚರಿಯ ಪ್ರಕರಣ ದಾಖಲಾಗಿದೆ.

ಮೂರು ತಿಂಗಳ ಹಿಂದೆ, 50 ರ ಹರೆಯದ ವ್ಯಕ್ತಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಪಾರ್ಶ್ವವಾಯುವಿನ ನಂತರ ಅವರ ದೇಹದ ಎಡಭಾಗವು ಸ್ವಾಧೀನ ಕಳೆದುಕೊಂಡಿತು. ಇದರಿಂದ ಅವರಿಗೆ ಊಟ ಮಾಡಲು ಕೂಡ ಕಷ್ಟಕರವಾಗಿತ್ತು. ಅಂದಿನಿಂದ ವೈದ್ಯರ ಶಿಫಾರಸಿನ ಮೇರೆಗೆ ಅವರಿಗೆ ದ್ರವ ಆಹಾರವನ್ನು ಮಾತ್ರ ನೀಡಲಾಯಿತು.

ಕೆಲವು ತಿಂಗಳುಗಳ ನಂತರ, ಅವರ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ರೋಮಗಳು ಕಾಣಿಸಿಕೊಂಡಿದೆ. ಇದರಿಂದ ಕಂಗೆಟ್ಟ ಅವರು ಕೇರಳದ ಕೊಚ್ಚಿನ್‌ನಲ್ಲಿರುವ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪರೀಕ್ಷೆ ನಡೆಸಿದ ಚರ್ಮರೋಗ ತಜ್ಞರು ಕಪ್ಪು ಕೂದಲುಳ್ಳ ನಾಲಿಗೆ ಎಂದು ಹೇಳಿದ್ದಾರೆ. ಅಂದರೆ ಇದನ್ನು ವೈದ್ಯಕೀಯವಾಗಿ ಲಿಂಗುವಾ ವಿಲೋಸಾ ನಿಗ್ರಾ ಎಂದು ಕರೆಯಲಾಗುತ್ತದೆ.

ಸ್ಟ್ರೋಕ್ ನಂತರ ಕಪ್ಪು ಕೂದಲುಳ್ಳ ನಾಲಿಗೆ

ಕಪ್ಪು ಕೂದಲುಳ್ಳ ನಾಲಿಗೆ ಅಥವಾ ಲಿಂಗುವಾ ವಿಲ್ಲೋಸಾ ನಿಗ್ರಾವು ಪಾಪಿಲ್ಲೆಗಳು, ನಾಲಿಗೆಯ ಮೇಲ್ಮೈಯಲ್ಲಿ ಸಣ್ಣ ಉಬ್ಬುಗಳು ಸ್ಟ್ರಾಬೆರಿಯಂತೆ ಕಾಣುವಂತೆ ಮಾಡುತ್ತವೆ. ಬ್ಯಾಕ್ಟೀರಿಯಾದಿಂದ ಇದು ಮುಚ್ಚಿಹೋಗಿವೆ. ಪಾಪಿಲ್ಲೆಗಳು ರುಚಿಮೊಗ್ಗುಗಳನ್ನು ಹೊಂದಿರುತ್ತವೆ ಸಾಮಾನ್ಯವಾಗಿ, ಅವು ಸುಮಾರು 1 ಮಿಮೀ ಉದ್ದದಲ್ಲಿ ಇರುತ್ತವೆ. ಆದರೆ, ನಾಲಿಗೆಯನ್ನು ಸ್ವಚ್ಛಗೊಳಿಸದಿದ್ದರೆ ಸಣ್ಣ ಗಂಟುಗಳು ಬೆಳೆಯುತ್ತಲೇ ಇರುತ್ತವೆ. ಇದು 18 ಮಿಮೀ ಉದ್ದವನ್ನು ತಲುಪಬಹುದು. ನಂತರ, ಬ್ಯಾಕ್ಟೀರಿಯಾ ಮತ್ತು ಯೀಸ್ಟ್ಗಳು ನಾಲಿಗೆಯ ಮೇಲೆ ಮಿತಿಮೀರಿ ಬೆಳೆದು ಬಣ್ಣವನ್ನು ಉಂಟುಮಾಡುತ್ತವೆ. ಇದು ಕೂದಲಿನಂತಹ ರಚನೆಗಳು ಕಾಣಿಸಿಕೊಳ್ಳುವುದಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.

ಅತಿ ಉದ್ದವಾದ ಪಾಪಿಲ್ಲೆಗಳು ಕೆರಾಟಿನ್‌ಗಳನ್ನು ಉತ್ಪಾದಿಸುತ್ತವೆ. ಅದೇ ಪ್ರೋಟೀನ್‌ಗಳು ಕೂದಲಿನಲ್ಲಿ ಕಂಡುಬರುತ್ತವೆ. ಇದು ನಾಲಿಗೆ ಕಪ್ಪು, ಬಿಳಿ ಮತ್ತು ಹಳದಿ ಬಣ್ಣಕ್ಕೂ ತಿರುಗಬಹುದು. ಹೀಗಾಗಿ ರೋಗಿಗೆ ಮತ್ತು ಆರೈಕೆ ಮಾಡುವವರಿಗೆ ನಾಲಿಗೆಯನ್ನು ಸರಿಯಾಗಿ ಶುಚಿಗೊಳಿಸುವ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ.

ಕಪ್ಪು ಕೂದಲುಳ್ಳ ನಾಲಿಗೆಗೆ ಕಾರಣಗಳು

ಇಂಗುವಾ ವಿಲೋಸಾ ನಿಗ್ರಾ ಹಾನಿಕಾರಕವಲ್ಲ, ಆದರೆ ಇದು ಅಸಹ್ಯಕರವಾಗಿದೆ. ಈ ಸ್ಥಿತಿಯು ಕಳಪೆ ಮೌಖಿಕ ಆರೋಗ್ಯಕ್ಕೆ ಸಂಬಂಧಿಸಿದ್ದರೂ, ಇದು ಧೂಮಪಾನ, ಮದ್ಯಪಾನ, ಕೊಕೇನ್ ಬಳಕೆ, ಕಾಫಿ, ನಿರ್ಜಲೀಕರಣ ಮತ್ತು ಪ್ರತಿಜೀವಕಗಳು ಸೇರಿದಂತೆ ಕೆಲವು ಔಷಧಿಗಳಿಂದಲೂ ಉಂಟಾಗುತ್ತದೆ.

ಕಪ್ಪು ಕೂದಲುಳ್ಳ ನಾಲಿಗೆ ಸಾಮಾನ್ಯವಾಗಿ ತಿನ್ನಲು ಕಷ್ಟಪಡುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ, ಅಂತಹ ತೊಡಕುಗಳನ್ನು ಕಡಿಮೆ ಮಾಡಲು ನೈರ್ಮಲ್ಯದ ಮೇಲೆ ಕೇಂದ್ರೀಕರಿಸಲು ಚರ್ಮರೋಗ ತಜ್ಞರು ಸಲಹೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...