alex Certify ಪಾರ್ಲರ್‌ಗೆ ಹೋಗದೆ ಕೇವಲ 5 ರೂಪಾಯಿಯಲ್ಲಿ ಮನೆಯಲ್ಲೇ ಮಾಡಿಕೊಳ್ಳಿ ಹೇರ್‌ ಸ್ಟ್ರೈಟ್ನಿಂಗ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಲರ್‌ಗೆ ಹೋಗದೆ ಕೇವಲ 5 ರೂಪಾಯಿಯಲ್ಲಿ ಮನೆಯಲ್ಲೇ ಮಾಡಿಕೊಳ್ಳಿ ಹೇರ್‌ ಸ್ಟ್ರೈಟ್ನಿಂಗ್‌…!

ಪ್ರತಿಯೊಬ್ಬರೂ ಆಕರ್ಷಕ ವ್ಯಕ್ತಿತ್ವವನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಕೂದಲು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಕೂದಲಿನ ಮೇಲೆ ನಾವು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತೇವೆ. ಹೇರ್ ಸ್ಟ್ರೈಟ್ನಿಂಗ್ ಕೂಡ ಇವುಗಳಲ್ಲೊಂದು. ಸಾಮಾನ್ಯವಾಗಿ ಎಲ್ಲರೂ ಹೇರ್‌ ಸ್ಟ್ರೈಟ್ನಿಂಗ್‌ ಮಾಡಿಕೊಳ್ಳಲು ಬ್ಯೂಟಿ ಪಾರ್ಲರ್‌ ಮೊರೆಹೋಗುತ್ತಾರೆ. ಅಥವಾ ಸ್ಟ್ರೈಟ್ನಿಂಗ್‌ ಉಪಕರಣಗಳನ್ನು ಕೂಡ ಬಳಸಬಹುದು. ಆದರೆ ಇವುಗಳಿಂದ ಕೂದಲಿಗೆ ಡ್ಯಾಮೇಜ್‌ ಆಗುತ್ತದೆ. ಕೂದಲು ಉದುರಲಾರಂಭಿಸುತ್ತದೆ.

ಹಾಗಾಗಿ ಹಣದ ಖರ್ಚಿಲ್ಲದೆ, ಕೂದಲಿಗೂ ಅಪಾಯವಿಲ್ಲದಂತಹ ಮನೆಮದ್ದುಗಳನ್ನು ಅನುಸರಿಸಬಹುದು. ಕೇವಲ 5 ರೂಪಾಯಿಯಲ್ಲಿ ಮನೆಯಲ್ಲಿಯೇ ಹೇರ್ ಸ್ಟ್ರೈಟ್ನಿಂಗ್ ಮಾಸ್ಕ್ ತಯಾರಿಸಿ. ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಸಹಾಯದಿಂದ ಈ ಮಾಸ್ಕ್‌ ತಯಾರಿಸಲಾಗುತ್ತದೆ. ಇದು ನಿಮ್ಮ ಕೂದಲಿಗೆ ಒಳಗಿನಿಂದ ಪೋಷಣೆಯನ್ನು ನೀಡುತ್ತದೆ. ಹಣದ ಉಳಿತಾಯದ ಜೊತೆಗೆ ರಾಸಾಯನಿಕ ಉತ್ಪನ್ನಗಳ ಬಳಕೆಯನ್ನು ಸಹ ತಪ್ಪಿಸಬಹುದು.

ಹೇರ್ ಸ್ಟ್ರೈಟ್ನಿಂಗ್ ಮಾಸ್ಕ್ ತಯಾರಿಸಲು 1 ಚಮಚ ಆಲಿವ್‌ ಆಯಿಲ್‌ ಹಾಗೂ 2 ಕೋಳಿ ಮೊಟ್ಟೆಗಳನ್ನು ತೆಗೆದುಕೊಳ್ಳಿ. ಮೊಟ್ಟೆಗಳನ್ನು ಒಡೆದು ಒಂದು ಬೌಲ್‌ಗೆ ಹಾಕಿಕೊಳ್ಳಿ. ಅದಕ್ಕೆ 1 ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ನಂತರ ಈ ಎರಡೂ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಕೂದಲನ್ನು ಸ್ಟ್ರೈಟ್‌ ಮಾಡಬಲ್ಲ ಈ ಮಾಸ್ಕ್‌ ಅನ್ನು ಅನ್ವಯಿಸುವ ಮೊದಲು ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ.

ನಂತರ ಬ್ರಷ್ ನ ಸಹಾಯದಿಂದ ಕೂದಲಿಗೆ ಸ್ಟ್ರೈಟನಿಂಗ್ ಮಾಸ್ಕ್ ಅನ್ನು ಹಚ್ಚಿರಿ. ಸುಮಾರು 20 ನಿಮಿಷಗಳ ಕಾಲ ಅದನ್ನು ಹಾಗೇ ಬಿಡಿ.ನಂತರ ತಣ್ಣೀರಿನ ಸಹಾಯದಿಂದ ಕೂದಲನ್ನು ತೊಳೆದು ಸ್ವಚ್ಛಗೊಳಿಸಿ.ಶಾಂಪೂ ಹಾಗೂ ಕಂಡಿಷನರ್‌ ಬಳಸಿ ತಲೆಸ್ನಾನ ಮಾಡಿ. ಈ ವಿಧಾನ ಅನುಸರಿಸಿದರೆ ನೈಸರ್ಗಿಕವಾಗಿ ನಿಮ್ಮ ಕೂದಲು ಸ್ಟ್ರೈಟ್‌ ಆಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...