alex Certify ಪಾರ್ಟಿಯಲ್ಲಿ ವೃದ್ಧ ದಂಪತಿಗಳ ಡಾನ್ಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿಯಲ್ಲಿ ವೃದ್ಧ ದಂಪತಿಗಳ ಡಾನ್ಸ್: ವಿಡಿಯೋ ವೈರಲ್

2018ರಲ್ಲಿ ಸಿಖ್ ದಂಪತಿಗಳು ಪಾರ್ಟಿಯಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಿದ್ದ ವೈರಲ್ ವಿಡಿಯೋ ನೆನಪಿದೆಯೇ..? ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವೃದ್ಧ ದಂಪತಿ ಒಟ್ಟಿಗೆ ನೃತ್ಯ ಮಾಡುವ ಹಲವಾರು ಇತರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು.

ಇದೀಗ ಮತ್ತೊಮ್ಮೆ ಮದುವೆ ಸಮಾರಂಭದಲ್ಲಿ ಅವರಿಬ್ಬರೂ ಜೊತೆಯಾಗಿ ಕುಣಿದಾಡುತ್ತಿರುವ ಹೊಸ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ದಂಪತಿಗಳು ಸಂಗೀತಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 1 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಮದುವೆ ಸಮಾರಂಭದಲ್ಲಿ ಈ ದಂಪತಿ ನೃತ್ಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇವರಿಬ್ಬರು ಹಾಡಿಗೆ ತಕ್ಕಂತೆ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಸಹಜವಾಗಿ, ಇಂಟರ್ನೆಟ್ ಸಂಪೂರ್ಣವಾಗಿ ನೃತ್ಯದ ವಿಡಿಯೋವನ್ನು ಇಷ್ಟಪಟ್ಟಿದೆ. ಕಾಮೆಂಟ್‌ ವಿಭಾಗ ತುಂಬೆಲ್ಲಾ ದಂಪತಿಗಳನ್ನು ನೆಟ್ಟಿಗರು ಅಭಿನಂದಿಸುವ ಪ್ರತಿಕ್ರಿಯೆಯೊಂದಿಗೆ ತುಂಬಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...