alex Certify ಪಾರ್ಟಿಯಲ್ಲಿ ಪುರುಷರ ಶರ್ಟ್ ಮೇಲೆ ಕಿಸ್ ಮಾಡಿದ ಯುವತಿ: ವಿಡಿಯೋ ನೋಡಿ ನೆಟ್ಟಿಗರು ಸಿಡಿಮಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಟಿಯಲ್ಲಿ ಪುರುಷರ ಶರ್ಟ್ ಮೇಲೆ ಕಿಸ್ ಮಾಡಿದ ಯುವತಿ: ವಿಡಿಯೋ ನೋಡಿ ನೆಟ್ಟಿಗರು ಸಿಡಿಮಿಡಿ

Woman slammed for planting kisses on t-shirts of unsuspecting men dubbed lipstick banditಪತಿ/ಪ್ರಿಯಕರನ ಮೈಮೇಲೆ ಎಲ್ಲಾದ್ರೂ ತಲೆಗೂದಲನ್ನು ಪತ್ನಿ/ಗೆಳತಿ ಕಂಡ್ರೆ ಆತನ ಕಥೆ ಅಷ್ಟೇ…… ಅದರಲ್ಲೂ ಮುತ್ತಿನ (ಲಿಪ್ಸ್ಟಿಕ್) ಗುರುತು ಕಂಡ್ರೆ ಮೂರನೇ ಮಹಾಯುದ್ಧ ಫಿಕ್ಸ್..! ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ..!

ಹೌದು, ಪಾರ್ಟಿಯೊಂದರಲ್ಲಿ ಎಲ್ಲರೂ ತಮ್ಮ ಪಾಡಿಗೆ ನೃತ್ಯ ಮಾಡುತ್ತಿದ್ದರೆ, ಯುವತಿಯೊಬ್ಬಳು ಪುರುಷರಿಗೆ ಗೊತ್ತಿಲ್ಲದಂತೆ ಅವರ ಶರ್ಟ್ ಗೆ ಹಿಂದಿನಿಂದ ಕಿಸ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕೆಯನ್ನು ಲಿಪ್‌ಸ್ಟಿಕ್ ಡಕಾಯಿತೆ ಎಂದು ಕರೆದಿದ್ದಾರೆ.

ಯುವಜನತೆ ಸೇಂಟ್ ಪ್ಯಾಟ್ರಿಕ್ ಡೇ ಆಚರಿಸುತ್ತಾ, ಸಂಭ್ರಮಿಸುತ್ತಿದ್ರೆ ಯುವತಿಯೊಬ್ಬಳು ಹಿಂದಿನಿಂದ ಬಂದು ಪುರುಷರ ಬೆನ್ನಿಗೆ ಕಿಸ್ ಮಾಡಿದ್ದಾಳೆ. ಲಿಪ್ಸ್ಟಿಕ್ ಹಚ್ಚುತ್ತಾ ಹಲವಾರು ಮಂದಿ ಪುರುಷರ ಬೆನ್ನ ಹಿಂದೆ ಶರ್ಟ್ ಗೆ ಮುತ್ತು ಕೊಟ್ಟಿದ್ದಾಳೆ. ನಂತರ ಅವಳು ಕ್ಯಾಮರಾವನ್ನು ನೋಡುತ್ತಾ, ನಗೆ ಬೀರಿದ್ದಾಳೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಕ್ಲಬ್‌ನಲ್ಲಿ ಯುವತಿಯ ಸ್ನೇಹಿತರು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ. ಅನೇಕರು ಈ ತಮಾಷೆಯನ್ನು ಉಲ್ಲಾಸದಾಯಕವೆಂದು ಹೇಳಿದ್ರೆ, ಇತರರು ಇದು ಸರಿಯಲ್ಲ ಎಂದು ಹೇಳಿದ್ದಾರೆ. ಇದು ಭಯಾನಕವಾಗಿದೆ, ಅವಳು ಬಹಳಷ್ಟು ಸಂಬಂಧಗಳನ್ನು ಹಾಳುಮಾಡಿದ್ದಾಳೆ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...