alex Certify ಪಾದಚಾರಿ ಮಹಿಳೆ ಅಜಾಗರೂಕತೆಯಿಂದ ಭಾರಿ ಅಪಘಾತ: ಮೈ ಜುಮ್ ಎನಿಸುತ್ತೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾದಚಾರಿ ಮಹಿಳೆ ಅಜಾಗರೂಕತೆಯಿಂದ ಭಾರಿ ಅಪಘಾತ: ಮೈ ಜುಮ್ ಎನಿಸುತ್ತೆ ಈ ವಿಡಿಯೋ

ಚಾಲಕ ಅಥವಾ ಪಾದಾಚಾರಿಗಳ ಅಜಾಗರೂಕತೆಯಿಂದಾಗಿ ರಸ್ತೆ ಅಪಘಾತಗಳು ಉಂಟಾಗುತ್ತಲೇ ಇರುತ್ತದೆ. ಸೋಶಿಯಲ್​ ಮೀಡಿಯಾದಲ್ಲಿ ಅಪಘಾತಗಳ ಸಿಸಿ ಟಿವಿ ದೃಶ್ಯಾವಳಿಗಳ ಮೈ ಜುಮ್ ಎನಿಸುವಂತಹ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ.

ಇಂತದ್ದೇ ಒಂದು ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಮಹಿಳೆಯೊಬ್ಬಳು ಅತ್ಯಂತ ಬೇಜವಾಬ್ದಾರಿಯಿಂದ ರಸ್ತೆ ದಾಟುತ್ತಿರೋದನ್ನು ಕಾಣಬಹುದಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮೂವರು ಮಹಿಳೆಯರು ರಸ್ತೆ ದಾಟಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ನಡುವೆ ಒಬ್ಬ ಮಹಿಳೆ ಮಾತ್ರ ಹಿಂದೆ ಮುಂದೆ ಯೋಚಿಸದೇ ರಸ್ತೆ ದಾಟಲು ಯತ್ನಿಸುತ್ತಾಳೆ. ಈಕೆಯನ್ನು ಅಪಘಾತದಿಂದ ರಕ್ಷಿಸಲು ಯತ್ನಿಸಿದ ಎರಡು ಕಾರುಗಳು ಅಪಘಾತಕ್ಕೆ ಒಳಗಾಗಿವೆ.

ಅಜಾಗರೂಕ ಪಾದಚಾರಿ ಕಾರು ಅಪಘಾತದಿಂದ ಅದೃಷ್ಟವಶಾತ್​ ಬದುಕುಳಿದಿದ್ದಾರೆ ಎಂಬ ಶೀರ್ಷಿಕೆಯನ್ನು ಈ ವಿಡಿಯೋಗೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...