alex Certify ಪಾಕ್​ ನಿಯಂತ್ರಿತ 35ಕ್ಕೂ ಅಧಿಕ ಯುಟ್ಯೂಬ್​ ಚಾನೆಲ್, ವೆಬ್​ಸೈಟ್​, ಟ್ವಿಟರ್​ ಖಾತೆ ಬ್ಯಾನ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್​ ನಿಯಂತ್ರಿತ 35ಕ್ಕೂ ಅಧಿಕ ಯುಟ್ಯೂಬ್​ ಚಾನೆಲ್, ವೆಬ್​ಸೈಟ್​, ಟ್ವಿಟರ್​ ಖಾತೆ ಬ್ಯಾನ್..!

ಗುಪ್ತಚರ ಇಲಾಖೆ ನೀಡಿರುವ ಮಾಹಿತಿಗಳನ್ನು ಆಧರಿಸಿ ಕೇಂದ್ರ ಸರ್ಕಾರವು 35 ಯುಟ್ಯೂಬ್​ ಚಾನೆಲ್​ಗಳು, 2 ಟ್ವಿಟರ್​ ಖಾತೆಗಳು, 2 ಇನ್​ಸ್ಟಾಗ್ರಾಂ ಖಾತೆಗಳು, 2 ವೆಬ್​ಸೈಟ್​ಗಳು ಹಾಗೂ ಫೇಸ್​ಬುಕ್​ ಖಾತೆಗಳನ್ನು ನಿರ್ಬಂಧಿಸಿದೆ.

ಗುಪ್ತಚರ ಇಲಾಖೆ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯಾಚರಣೆಯಲ್ಲಿ ಕಳೆದ ತಿಂಗಳು 20 ಯುಟ್ಯೂಬ್​​ ಚಾನೆಲ್​ಗಳು ಹಾಗೂ 2 ವೆಬ್​ಸೈಟ್​ಗಳನ್ನು ನಿರ್ಬಂಧಿಸಿದ್ದವು. ಈ ಚಾನೆಲ್​ಗಳು ಹಾಗೂ ವೆಬ್​ಸೈಟ್​ಗಳಲ್ಲಿ ದೇಶ ವಿರೋಧಿ ಚಟುವಟಿಕೆ ಹಾಗೂ ನಕಲಿ ಸುದ್ದಿಗಳನ್ನು ಹರಡಲಾಗುತ್ತಿತ್ತು.

ಈ ವಿಚಾರವಾಗಿ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್​ ಸಹಾಯ್​​ , ಈ ಎಲ್ಲಾ ಖಾತೆಗಳಲ್ಲಿರುವ ಸಾಮಾನ್ಯ ವಿಚಾರವೆಂದರೆ ಅವರೆಲ್ಲ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಭಾರತದ ವಿರುದ್ಧ ನಕಲಿ ವಿಚಾರಗಳನ್ನು ಹರಡಲಾಗುತ್ತಿದೆ ಎಂದು ಹೇಳಿದರು.

ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಯು ಟ್ಯೂಬ್​ ಚಾನೆಲ್​ಗಳು ಹಾಗೂ ವೆಬ್​ಸೈಟ್​ಗಳು ದೇಶದ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವ ಕೆಲಸವನ್ನು ಮಾಡುತ್ತಿವೆ. ಕಾಶ್ಮೀರ, ಭಾರತೀಯ ಸೇನೆ, ಭಾರತದಲ್ಲಿನ ಅಲ್ಪಸಂಖ್ಯಾತ ಸಮುದಾಯ, ರಾಮ ಮಂದಿರ, ಜನರಲ್​ ಬಿಪಿನ್​ ರಾವತ್​ ಇತ್ಯಾದಿ ವಿಚಾರಗಳಲ್ಲಿ ದೇಶದ್ರೋಹಿ ಪೋಸ್ಟ್​ಗಳನ್ನು ಮಾಡಲಾಗಿತ್ತು.

ಯುಟ್ಯೂಬ್​​ನ ನಯಾಪಾಕಿಸ್ತಾನ ಎಂಬ ಚಾನೆಲ್​ನಲ್ಲಿ 35 ಲಕ್ಷಕ್ಕೂ ಅಧಿಕ ಚಂದಾದಾರರು ಇದ್ದಾರೆ ಎನ್ನಲಾಗಿದೆ. ಈ ಯುಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಲಾಗುವ ವಿಡಿಯೋಗಳು 55 ಕೋಟಿಗೂ ಅಧಿಕ ವೀವ್ಸ್​ ಸಂಪಾದಿಸುತ್ತಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...