alex Certify ಪಾಕಿಸ್ತಾನ ಸೇನೆಗೆ ಹೊಸ ಸಾರಥಿ: ಜನರಲ್‌ ಬಾಜ್ವಾ ಸ್ಥಾನಕ್ಕೆ ಅಸೀಮ್‌ ಮುನೀರ್‌ ನೇಮಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನ ಸೇನೆಗೆ ಹೊಸ ಸಾರಥಿ: ಜನರಲ್‌ ಬಾಜ್ವಾ ಸ್ಥಾನಕ್ಕೆ ಅಸೀಮ್‌ ಮುನೀರ್‌ ನೇಮಕ

ಪಾಕಿಸ್ತಾನ ಸೇನೆಗೆ ಹೊಸ ಮುಖ್ಯಸ್ಥರ ನೇಮಕವಾಗಿದೆ. ಲೆಫ್ಟಿನೆಂಟ್ ಜನರಲ್ ಅಸೀಮ್‌ ಮುನೀರ್ ಪಾಕಿಸ್ತಾನದ ಸೇನೆಯ ಹೊಸ ಮುಖ್ಯಸ್ಥರಾಗಲಿದ್ದಾರೆ.

ನವೆಂಬರ್ 29 ರಂದು ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ನಿವೃತ್ತರಾಗಲಿದ್ದು, ಆ ಸ್ಥಾನವನ್ನು ಅಸೀಮ್‌ ಮುನೀರ್‌ ಅಲಂಕರಿಸಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಸಾಹಿರ್ ಶಂಶಾದ್ ಮಿರ್ಜಾ ಅವರನ್ನು ಜಂಟಿ ಮುಖ್ಯಸ್ಥರನ್ನಾಗಿ ಮತ್ತು ಲೆಫ್ಟಿನೆಂಟ್ ಜನರಲ್ ಸೈಯದ್ ಅಸಿಮ್ ಮುನೀರ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನಿರ್ಧರಿಸಿದ್ದಾರೆ. ಪಾಕ್ ಸೇನಾ ಮುಖ್ಯಸ್ಥ ಹುದ್ದೆಯ ರೇಸ್‌ನಲ್ಲಿ ಮುನೀರ್ ಹೆಸರು ಮುಂಚೂಣಿಯಲ್ಲಿತ್ತು.

ಲೆಫ್ಟಿನೆಂಟ್ ಜನರಲ್ ಆಗಿ, ಮುನೀರ್ ಅವರ ನಾಲ್ಕು ವರ್ಷಗಳ ಅಧಿಕಾರಾವಧಿ ಜನರಲ್ ಬಜ್ವಾ ಅವರ ನಿವೃತ್ತಿಗೆ ಎರಡು ದಿನಗಳ ಮೊದಲು ನವೆಂಬರ್ 27 ರಂದು ಕೊನೆಗೊಳ್ಳಲಿದೆ, ಮುನೀರ್‌ ನಿವೃತ್ತಿಗೂ ಮುನ್ನವೇ ಸೇನಾ ಮುಖ್ಯಸ್ಥ ಹುದ್ದೆಯನ್ನು ನೀಡಲಾಗಿದೆ. ಹಾಗಾಗಿ ನೇಮಕಾತಿ ಸವಾಲು ಎದುರಾಗಬಹುದು. ಅವರ ಸೇವೆಯಲ್ಲಿ ಮೂರು ವರ್ಷಗಳ ವಿಸ್ತರಣೆಯಾಗಲಿದೆ.

ಲೆಫ್ಟಿನೆಂಟ್ ಜನರಲ್ ಮುನೀರ್, ಫ್ರಂಟಿಯರ್ ಫೋರ್ಸ್ ರೆಜಿಮೆಂಟ್‌ಗೆ ನಿಯೋಜನೆಗೊಂಡಿದ್ದರು. ಜನರಲ್ ಬಜ್ವಾ ಅವರ ಮುಂದಾಳತ್ವದಲ್ಲಿ ಬ್ರಿಗೇಡಿಯರ್ ಆಗಿ, ಸೇನಾಪಡೆಯನ್ನು ಮುನ್ನಡೆಸಿದ್ದರು. 2017ರ ಆರಂಭದಲ್ಲಿ ಮುನೀರ್ ಅವರನ್ನು ಮಿಲಿಟರಿ ಗುಪ್ತಚರ ಮುಖ್ಯಸ್ಥರನ್ನಾಗಿ ಪಾಕಿಸ್ತಾನ ಸರ್ಕಾರ ನೇಮಿಸಿತ್ತು. 2018ರ  ಅಕ್ಟೋಬರ್‌ನಲ್ಲಿ ಅವರು ISI ಮುಖ್ಯಸ್ಥರಾಗಿದ್ದರು. ಆದಾಗ್ಯೂ ಉನ್ನತ ಗುಪ್ತಚರ ಅಧಿಕಾರಿಯಾಗಿ ಅವರ ಅವಧಿ ಅಲ್ಪವಾಗಿದೆ. ಏಕೆಂದರೆ ಕೇವಲ ಎಂಟು ತಿಂಗಳುಗಳಲ್ಲಿ ಆಗಿನ ಪ್ರಧಾನಿ ಇಮ್ರಾನ್ ಖಾನ್ ಅವರ ಒತ್ತಾಯದ ಮೇರೆಗೆ ಮುನೀರ್‌ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಬಂದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...