alex Certify ‘ಪರಮ ಸುಂದರಿ’ ಹಾಡಿಗೆ ಸೊಂಟ ಬಳುಕಿಸಿದ್ರು ಗಗನಸಖಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪರಮ ಸುಂದರಿ’ ಹಾಡಿಗೆ ಸೊಂಟ ಬಳುಕಿಸಿದ್ರು ಗಗನಸಖಿಯರು

ಕಳೆದ ವರ್ಷ ಇಂಡಿಗೋ ಏರ್ ಹೋಸ್ಟೆಸ್ ಶ್ರೀಲಂಕಾದ ಮಾಣಿಕೆ ಮಾಗೆ ಹಿತೆ ಎಂಬ ಸುಮಧುರ ಗೀತೆಗೆ ನೃತ್ಯ ಮಾಡುವ ವಿಡಿಯೋವನ್ನು ಹಂಚಿಕೊಂಡ ನಂತರ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲಿಂದೀಚೆಗೆ, ಇದು ಕ್ಯಾಬಿನ್ ಸಿಬ್ಬಂದಿಯಲ್ಲಿ ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ.

ಗಗನಸಖಿಯರು ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡುವ ಹಲವಾರು ವಿಡಿಯೋಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಇವರಲ್ಲಿ ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ಜನಪ್ರಿಯ ಹಾಡಗಳಿಗೆ ನೃತ್ಯ ಮಾಡುವ ಹಲವಾರು ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.

ಇದೀಗ ಉಮಾ ಮೀನಾಕ್ಷಿ ಅವರು ಕೃತಿ ಸನನ್ ಅವರ ಪರಮ ಸುಂದರಿ ಹಾಡಿಗೆ ತಮ್ಮ ಸಿಬ್ಬಂದಿಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಉಮಾ ತನ್ನ ಇಬ್ಬರು ಸಹೋದ್ಯೋಗಿಗಳೊಂದಿಗೆ ಪರಮ ಸುಂದರಿ ಹಾಡಿಗೆ ಅದ್ಭುತವಾಗಿ ಸೊಂಟ ಬಳುಕಿಸಿದ್ದಾರೆ. ಮೂವರೂ ಸಮವಸ್ತ್ರ ಮತ್ತು ಮುಖಗವಸುಗಳನ್ನು ಧರಿಸಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಗಗನಸಖಿಯರ ಡಾನ್ಸ್ ಅನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗವನ್ನು ಹೃದಯ ಮತ್ತು ಬೆಂಕಿಯ ಎಮೋಜಿಗಳಿಂದ ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...