alex Certify ಪನಾಮ ಪೇಪರ್​ ಲೀಕ್​ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ನಟಿ ಐಶ್ವರ್ಯಾ ರೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪನಾಮ ಪೇಪರ್​ ಲೀಕ್​ ಪ್ರಕರಣ: ಇಡಿ ವಿಚಾರಣೆಗೆ ಹಾಜರಾದ ನಟಿ ಐಶ್ವರ್ಯಾ ರೈ

ಪನಾಮ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್​ ನಟಿ ಐರ್ಶಯಾ ರೈ ಬಚ್ಚನ್​ರಿಗೆ ಜಾರಿ ನಿರ್ದೇಶನಾಲಯ ಸಮನ್ಸ್​ ಜಾರಿ ಮಾಡಿತ್ತು.

ತೆರಿಗೆಯನ್ನು ತಪ್ಪಿಸಲು ಕಡಲಾಚೆಯ ದ್ವೀಪಗಳಲ್ಲಿ ಹೇಗೆ ಕಂಪನಿಗಳನ್ನು ಸ್ಥಾಪಿಸಲಾಗಿದೆ ಅನ್ನೋದನ್ನು ಪನಾಮ ಪೇಪರ್ಸ್​ ತೋರಿಸಿದ ಬಳಿಕ ಜಾರಿ ನಿರ್ದೇಶನಾಲಯ ಪಿಎಂಎಲ್​ಎ ಪ್ರಕರಣವನ್ನು ದಾಖಲು ಮಾಡಿದೆ.

ಸಾಕಷ್ಟು ಮಾಧ್ಯಮಗಳ ವರದಿಯ ಬಳಿಕ ನಟಿ ಐಶ್ವರ್ಯಾ ರೈ ಬಚ್ಚನ್​ರನ್ನು ಇಡಿ ವಿಚಾರಣೆಗೆ ಹಾಜರುಪಡಿಸಿದೆ.

ಇಂದು ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗುವಂತೆ ಐಶ್ವರ್ಯಾ ರೈಗೆ ಇಡಿ ಸಮನ್ಸ್​ ನೀಡಿತ್ತು. ಇದಕ್ಕೂ ಮುನ್ನ ಸೆಕ್ಷನ್​ 37 ಫೆಮಾ ಅಡಿಯಲ್ಲಿ ನಟಿ ಐಶ್ವರ್ಯಾರಿಗೆ ನವೆಂಬರ್​ 9ರಂದು ಇಡಿ ಸಮನ್ಸ್​ ನೀಡಿತ್ತು. ಮುಂಬೈನಲ್ಲಿರುವ ನಟಿ ಐಶ್ವರ್ಯಾ ರೈ ನಿವಾಸ ಪ್ರತೀಕ್ಷಾಗೆ ಇಡಿ ಸಮನ್ಸ್​ ಕಳುಹಿಸಿದೆ. ಈ ಸಮನ್ಸ್​ಗೆ 15 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಇಡಿ ಸೂಚನೆ ನೀಡಿದೆ.

ವರದಿಗಳ ಪ್ರಕಾರ ಹಣ ವರ್ಗಾವಣೆ ತಡೆ ಕಾಯ್ದೆ (2002) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಪ್ರಕರಣ ದಾಖಲು ಮಾಡಿದೆ. ಇಡಿ ಇಂದು ಕಚೇರಿಗೆ ಹಾಜರಾಗುವಂತೆ ನಟಿ ಐಶ್ವರ್ಯಾರಿಗೆ ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಅವರು ಇಂದು ನವದೆಹಲಿಯ ಇಡಿ ಕಛೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ಐಶ್ವರ್ಯಾರನ್ನು ಇಂದಿನ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿದೆ ಎಂದು ಇಡಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾವು ಅವರಿಗೆ ಇಂದು ತನಿಖೆಗೆ ಹಾಜರಾಗುವಂತೆ ಹೇಳಿದ್ದೆವು. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಸಮನ್ಸ್​ನ್ನು ಮುಂಬೈನಲ್ಲಿರುವ ಅವರ ನಿವಾಸಕ್ಕೆ ಕಳುಹಿಸಲಾಗಿತ್ತು. ಆ ಬಳಿಕ ಅವರು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...